ಕೊಕ್ರಜಾರ್(ಅಸ್ಸೋಂ): ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕೊಕ್ರಜಾರ್ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಕ್ರಜಾರ್ ಜಿಲ್ಲೆಯ ಲಿಯೋಪಾನಿ ನಲಾ ಮತ್ತು ಉಲ್ಟಾಪಾನಿ ನಲಾ ಹಾಗೂ ಭಾರತ ಭೂತಾನ್ ಗಡಿ ಬಳಿ ನೆಲದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆಯಾಗಿವೆ.
ಎಕೆ -56, ಗ್ರೆನೇಡ್ ಲಾಂಚರ್, .22 ರೈಫಲ್, ದೇಶಿ ನಿರ್ಮಿತ ರೈಫಲ್, 22 ಪಿಸ್ತೂಲ್, 7.65 ಎಂಎಂ ಪಿಸ್ತೂಲ್, 9 ಎಂಎಂ ಪಿಸ್ತೂಲ್, ಸ್ಯಾಟಲೈಟ್ ಫೋನ್, ಸ್ವದೇಶಿ ನಿರ್ಮಿತ ಗ್ರೆನೇಡ್ ಮತ್ತು ಅಪಾರ ಪ್ರಮಾಣದ ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.