ಆಗ್ರಾ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಂದ ಹೆಚ್ಚು ಪ್ರೇರಿತನಾಗಿದ್ದೆ ಎಂದು ಹೇಳಿಕೊಳ್ಳುವ ಆಗ್ರಾದ ಯುವಕನೊಬ್ಬ ಚಂದ್ರನ ಮೇಲೆ ಜಾಗ ಖರೀದಿಸಿದ್ದಾನೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ಯುವಕ ಗೌರವ್ ಗುಪ್ತಾ, ಸುಶಾಂತ್ ಜಾಗ ಖರೀದಿಸಿದ ವಿಷಯ ತಿಳಿದ ನಂತರ ಚಂದ್ರನ ಮೇಲೆ ಜಾಗ ಖರೀದಿಸುವ ಆಲೋಚನೆ ತನ್ನ ಮನಸ್ಸಿಗೆ ಬಂತು ಎಂದಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ನಾನು ಸಾಕಷ್ಟು ಬೇಸರಗೊಂಡಿದ್ದೇನೆ. ನಾನು ಅವರನ್ನು ನನ್ನ ಜೀವನಕ್ಕೆ ಆದರ್ಶಪ್ರಾಯವೆಂದು ಪರಿಗಣಿಸುತ್ತೇನೆ. ಚಂದ್ರನ ಮೇಲೆ ಜಾಗ ಖರೀದಿಸಿದವರಲ್ಲಿ ಸುಶಾಂತ್ ಕೂಡ ಒಬ್ಬರು ಎಂದು ತಿಳಿದ ನಂತರ ನಾನು ಚಂದ್ರನ ಮೇಲೆ ಜಾಗ ಖರೀದಿಸಲು ನಿರ್ಧರಿಸಿದೆ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.
ಅಮೆರಿಕಾ ಮೂಲದ ತನ್ನ ಸ್ನೇಹಿತನಿಂದ ಸಹಾಯ ಪಡೆಯದಿದ್ದಲ್ಲಿ ಚಂದ್ರನ ಮೇಲೆ ಒಂದು ಎಕರೆ ಜಾಗವನ್ನು ಖರೀದಿಸುವುದು ಕಷ್ಟವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಚಂದ್ರನ ಮೇಲೆ ಜಾಗ ಖರೀದಿಸಲು ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತವನ್ನು ತೋರಿಸಬೇಕಾಗಿದೆ. ಈ ವೇಳೆ ನನ್ನ ಸ್ನೇಹಿತ ನನಗೆ ಸಹಾಯ ಮಾಡಿದ ಮತ್ತು ನನಗೆ ಜಾಗ ಸಿಕ್ಕಿತು ಎಂದು ಹೇಳಿದ್ದಾನೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳುಗಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ.
ಅಮೆರಿಕಾದ ಏಜೆನ್ಸಿ ಲೂನಾರ್ ರಾಯಭಾರ ಕಚೇರಿಯು ಈ ಪ್ಲಾಟ್‌ಗಳನ್ನು ಮಾರುತ್ತದೆ ಮತ್ತು ನನ್ನ ನೆಚ್ಚಿನ ನಟನಿಗೂ ಸಹ ಅಲ್ಲಿ ಒಂದು ಪ್ಲಾಟ್ ಇದೆ ಎಂದು ತಿಳಿದ ನಂತರ ನನಗೆ ಒಂದು ಪ್ಲಾಟ್ ಸಿಕ್ಕಿತು ಎಂದಿದ್ದಾರೆ.