ETV Bharat / bharat

ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಕಬ್ಬಿಣದ ಸರಳು ಹಾಕಿದ ಪಾಪಿಗಳು - after the gang rape of the woman put iron bar in a private part

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮೂವರು ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಅಮಾನುಷ ರೀತಿಯಲ್ಲಿ ಸಂತ್ರಸ್ತೆಯ ಖಾಸಗಿ ಭಾಗದಲ್ಲಿ ಕಬ್ಬಿಣದ ಸರಳು ಹಾಕಿದ್ದಾರೆ.

Gang rape in women in MP
ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Jan 11, 2021, 10:50 AM IST

ಸಿಧಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಹ್ಯೇಯ ಕೃತ್ಯವೊಂದು ವರದಿಯಾಗಿದೆ. ಮೂವರು ಯುವಕರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಮಹಿಳೆಯ ಖಾಸಗಿ ಭಾಗದಲ್ಲಿ ಕಬ್ಬಿಣದ ಸರಳು ಹಾಕಿ ಅಮಾನವೀಯತೆ ಮೆರೆದಿದ್ದಾರೆ.

ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಈ ನೀಚ ಕೃತ್ಯ ಎಸಗಿದ ಆರೋಪಿಗಳು ಅದೇ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಅಮಿಲಿಯಾ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಆರೋಪ: ಒಬ್ಬನ ಬಂಧನ

ಘಟನೆ ವಿವರ: ಮಾಹಿತಿಯ ಪ್ರಕಾರ, ಮಹಿಳೆಯ ಪತಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಅಂದಿನಿಂದ, ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಗುಡಿಸಲಿನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಶನಿವಾರ ರಾತ್ರಿ ಮೂವರು ಯುವಕರು ಮಹಿಳೆಯನ್ನು ಕೂಗಿ ನೀರು ಕೇಳಿದ್ದಾರೆ. ನೀರು ಇಲ್ಲ ಎಂದು ಮಹಿಳೆ ಹೇಳಿದಾಗ, ಆರೋಪಿಗಳು ಗುಡಿಸಲಿಗೆ ನುಗ್ಗಿದ್ದಾರೆ. ಬಳಿಕ ಮಹಿಳೆಯೊಂದಿಗೆ ಕೆಟ್ಟದಾಗಿ ವರ್ತಿಸಲು ಆರಂಭಿಸಿದ್ದಾರೆ. ನಂತರ ಮೂವರು ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಅಮಾನುಷ ರೀತಿಯಲ್ಲಿ ಸಂತ್ರಸ್ತೆಯ ಖಾಸಗಿ ಭಾಗದಲ್ಲಿ ಕಬ್ಬಿಣದ ಸರಳು ಹಾಕಿದ್ದಾರೆ.

ಬಳಿಕ ಸಂತ್ರಸ್ತೆಯನ್ನು ಆಕೆಯ ಸಹೋದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಮಿಲಿಯಾಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸಾವು-ಬದುಕಿನ ನಡುವೆ ಸಂತ್ರಸ್ತೆ ಹೋರಾಟ ನಡೆಸಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.