ETV Bharat / bharat

'ಅಧಿಕಾರಿ' ಸಹೋದರರ ಪಕ್ಷಾಂತರ ಪರ್ವ: ಸುವೆಂದು ಬೆನ್ನಲ್ಲೇ ಬಿಜೆಪಿ ಸೇರಿದ ಸೌಮೆಂದು - West Bengal latest News

ಇತ್ತೀಚೆಗೆ ಕೇಸರಿ ಪಕ್ಷ ಸೇರಿರುವ ಸುವೆಂದು ಅಧಿಕಾರಿ ಪಕ್ಷದ ಧ್ವಜ ನೀಡುವ ಮೂಲಕ ಸೌಮೆಂದು ಮತ್ತು ಇತರ 14 ಮಂದಿ ಪುರಸಭೆ ಸದಸ್ಯರನ್ನು ಬರಮಾಡಿಕೊಂಡರು.

ಸುವೆಂದು ಬೆನ್ನಲ್ಲೇ ಬಿಜೆಪಿ ಸೇರಿದ ಸೌಮೆಂದು
ಸುವೆಂದು ಬೆನ್ನಲ್ಲೇ ಬಿಜೆಪಿ ಸೇರಿದ ಸೌಮೆಂದು
author img

By

Published : Jan 1, 2021, 7:54 PM IST

ಕೊಲ್ಕತ್ತಾ: ಪುರ್ಬಾ ಮೇದಿನಿಪುರ ಜಿಲ್ಲೆಯ ಕಾಂಟೈ ಪುರಸಭೆಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ನಂತರ ಟಿಎಂಸಿ ಮುಖಂಡ ಸೌಮೆಂದು ಅಧಿಕಾರಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸೌಮೆಂದು ಅಧಿಕಾರಿ ಸೇರಿ 14 ಮಂದಿ ಪುರಸಭೆ ಸದಸ್ಯರು ಬಿಜೆಪಿಗೆ ಸೇರ್ಪಡೆ

"ಕಮಲ ಎಲ್ಲರ ಮನೆಯಲ್ಲಿ ಅರಳುತ್ತದೆ, ಸ್ವಲ್ಪ ಕಾಯಿರಿ. ನಾವು 108 ಕಮಲಗಳೊಂದಿಗೆ ದುರ್ಗೆಯನ್ನು ಪೂಜೆ ಮಾಡುತ್ತೇವೆ" ಎಂದು ಸೌಮೆಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಸೌಮೆಂದು ಅವರನ್ನು ಟಿಎಂಸಿ ಇತ್ತೀಚೆಗಷ್ಟೇ ಪುರಸಭೆ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿತ್ತು. ಈ ವಿಚಾರವನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್​ಗೆ ಅವರು ಅರ್ಜಿ ಸಲ್ಲಿಸಿದ್ದರು.

ಓದಿ: ನಿರೀಕ್ಷೆಯಂತೆ​ ಶಾ ರ‍್ಯಾಲಿಯಲ್ಲಿ ಮಮತಾಗೆ ಟಾಂಗ್​ ಕೊಟ್ಟ ’ಅಧಿಕಾರಿ’: 11 ಎಂಎಲ್​​ಎಗಳು ಬಿಜೆಪಿ ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.