ETV Bharat / bharat

ನಿರಾಸೆ ಬಳಿಕ ಸುಂದರ ಬದುಕಿಗೆ ನೆರವಾಗಿದ್ದು 'ಶ್ವಾನ ಸಾಕಾಣಿಕೆ'...! - ಶ್ವಾನ ಸಾಕಾಣಿಕೆಯಲ್ಲಿ ಸಾಧನೆ

ಉದ್ಯೋಗವಿಲ್ಲದೇ ನಿರಾಸೆಗೀಡಾದರೂ ಅದರಾಚೆಗೂ ಒಂದು ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಸ್ವ-ಉದ್ಯೋಗದ ಮೂಲಕ ಕುರುಕ್ಷೇತ್ರ ಜಿಲ್ಲೆಯ ಯುವಕ ತರಂಜಿತ್ ಮಲ್ಹೋತ್ರಾ ನಿರೂಪಿಸಿ ತೋರಿಸಿದ್ದಾರೆ.

after rejection in job engineer taranjeet doing successfully dog business in kurukshetra
ನಿರಾಶೆಯಾಗೆಗಿನ ಸುಂದರ ಬದುಕಿಗೆ ನೆರವಾಗಿದ್ದು 'ಶ್ವಾನ ಸಾಕಾಣಿಕೆ',,, ಇದು ಯುವಕರಿಗೆ ಸ್ಪೂರ್ತಿ
author img

By

Published : Aug 14, 2020, 1:03 PM IST

ಕುರುಕ್ಷೇತ್ರ(ಹರಿಯಾಣ): ಇತ್ತೀಚಿನ ದಿನಗಳಲ್ಲಿ, ಯುವಕರ ಮುಂದಿರುವ ಅತಿ ದೊಡ್ಡ ಸವಾಲೆಂದರೆ ಅದು ನಿರುದ್ಯೋಗ ಸಮಸ್ಯೆ. ಬಾಲ್ಯದಿಂದಲೂ ದೊಡ್ಡವರಾದ ಮೇಲೆ ದೊಡ್ಡ ಉದ್ಯೋಗ ಪಡೆದು ಆರು ಅಂಕಿಯ ಸಂಬಳ ಎಣಿಸುವ ಕನಸು ಕಾಣುವುದು ಸಹಜ. ಆದರೆ ಎಲ್ಲ ಓದು ಮುಗಿದ ಮೇಲೆ ಉದ್ಯೋಗಕ್ಕೆ ಸೇರುವ ಸಮಯ ಬಂದಾಗ ಕೆಲಸವಿಲ್ಲದೇ ಬಹುತೇಕರು ನಿರಾಸೆರಾಗುತ್ತಾರೆ. ಹೀಗೆ ನಿರಾಸೆಗೀಡಾದರೂ ಅದರಾಚೆಗೂ ಒಂದು ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಕುರುಕ್ಷೇತ್ರ ಜಿಲ್ಲೆಯ ಯುವಕ ತರಂಜಿತ್ ಮಲ್ಹೋತ್ರಾ ನಿರೂಪಿಸಿ ತೋರಿಸಿದ್ದಾರೆ.

ನಿರಾಸೆಯಾಚೆಗಿನ ಸುಂದರ ಬದುಕಿಗೆ ನೆರವಾಗಿದ್ದು 'ಶ್ವಾನ ಸಾಕಾಣಿಕೆ',,, ಇದು ಯುವಕರಿಗೆ ಸ್ಪೂರ್ತಿ

ತರಂಜಿತ್ ಶ್ರದ್ಧೆಯಿಂದ ಇಂಜಿನಿಯರಿಂಗ್ ಅಧ್ಯಯನ ಮುಗಿಸಿದರು. ಆದರೆ, ಅವರು ಉದ್ಯೋಗ ಹುಡುಕಲು ಪ್ರಾರಂಭಿಸಿದಾಗ ಹೈ-ಫೈ ಉದ್ಯೋಗ ಪಡೆಯುವ ಅವರ ಕನಸಿಗೆ ಬೆಂಕಿ ಬಿತ್ತು. ಆದರೂ ಅವರು ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಆದರೆ, ಸ್ವಾವಲಂಬಿಯಾಗುವುದಾಗಿ ವಾಗ್ದಾನ ಮಾಡಿದ್ದರು. ಆಗ ಅವರಿಗೆ ಹೊಳೆದ ಸ್ವ- ಉದ್ಯೋಗ ಎಂದರೆ ಶ್ವಾನ ವ್ಯಾಪಾರ ಮಾಡುವುದು.

ಕೇವಲ ಹತ್ತು ಸಾವಿರ ರೂಪಾಯಿಗಳೊಂದಿಗೆ ವ್ಯವಹಾರ ಪ್ರಾರಂಭಿಸಿದ ತಾರಂಜಿತ್ ಮಲ್ಹೋತ್ರಾ ಅವರು ಇಂದು 50 ಸಾವಿರ ರೂಪಾಯಿಯಿಂದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ ನಾಯಿಗಳನ್ನ ಸಾಕಿ ಮಾರಾಟ ಮಾಡುತ್ತಾರೆ.

ನಾಯಿಗಳಿಗಾಗಿ ನಿರ್ಮಿಸಲಾಗಿದೆ ಹವಾನಿಯಂತ್ರಿತ ಫಾರ್ಮ್ ಹೌಸ್:

ಈ ನಾಯಿಗಳನ್ನು ಸುಮಾರು 1 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಹವಾನಿಯಂತ್ರಣ ಕೊಠಡಿಗಳಲ್ಲಿರಿಸಿ ಸಾಕಲಾಗುತ್ತಿದೆ. ಜೊತೆಗೆ ಇಬ್ಬರನ್ನು ಅವುಗಳ ನಿರ್ವಹಣೆಗೆ ಅಂತಾನೇ ನೇಮಕ ಮಾಡಲಾಗಿದೆ. ಸ್ವ - ಇಚ್ಛೆಯಿಂದ ನಡೆಸಲಾಗುತ್ತಿರುವ ಈ ಉದ್ಯೋಗದಿಂದ ತಿಂಗಳಿಗೆ 1 ಲಕ್ಷ ರೂ.ಗಿಂತ ಅಧಿಕ ಆದಾಯಗಳಿಸುತ್ತಾರೆ.

ತರಂಜಿತ್ ಮಲ್ಹೋತ್ರಾ ಅವರ ಈ ಸಾಧನೆ ದೇಶದ ಲಕ್ಷಾಂತರ ನಿರುದ್ಯೋಗಿಗಳಿಗೆ ಸ್ಪೂರ್ತಿದಾಯಕವಾಗಿದೆ. ಒಂದು ಮಾರ್ಗ ಮುಚ್ಚಿದ್ದರೆ ಇನ್ನೊಂದು ಮಾರ್ಗ ತೆರೆದುಕೊಳ್ಳುತ್ತದೆ. ಆ ಮಾರ್ಗದಲ್ಲಿ ನಡೆದು ಯಶಸ್ಸು ಕಾಣಬೇಕು ಎಂಬುದನ್ನ ಯುವಕರಿಗೆ ತೋರಿಸಿಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.