ನವದೆಹಲಿ : ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಆತಿಥ್ಯ(ಹೋಟೆಲ್) ಉದ್ಯಮವು ಹೆಚ್ಚು ಹೊಡೆತಕ್ಕೊಳಗಾಗಿದೆ. ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ಮುಚ್ಚಿದ್ದ ಹೋಟೆಲ್ ಹಾಗೂ ರೆಸಾರ್ಟ್‌ಗಳು ಸೂಕ್ತ ನೈರ್ಮಲ್ಯ ಕ್ರಮಗಳು ಮತ್ತು ಮಾನದಂಡಗಳನ್ನು ಅನುಸರಿಸುವುದರೊಂದಿಗೆ ಮತ್ತೆ ತೆರೆಯಲು ಸಜ್ಜಾಗುತ್ತಿವೆ.
ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ(HAI)ದ ಉಪಾಧ್ಯಕ್ಷ ಕೆ ಬಿ ಕಚ್ರು, ವೈರಸ್ ಹರಡುವುದನ್ನು ತಡೆಯಲು ಉತ್ತಮ ಸುರಕ್ಷತೆ ಮತ್ತು ನೈರ್ಮಲ್ಯ ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಹೋಟೆಲ್‌ಗಳು "ಗೋಲ್ಡ್" ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು (SOP) ಜಾರಿಗೆ ತರುತ್ತಿವೆ ಎಂದು ತಿಳಿಸಿದ್ದಾರೆ. ಅತ್ಯುತ್ತಮ ಮತ್ತು ವರ್ಧಿತ ಕ್ರಮಗಳನ್ನು ಜಾರಿಗೆ ತರಲು ಹಲವಾರು ಹೋಟೆಲ್‌ಗಳು ಜಾಗತಿಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಅವರು ಹೇಳಿದರು.
ಜೂನ್ 8ರಂದು ಹೋಟೆಲ್ ಮತ್ತು ರೆಸಾರ್ಟ್‌ಗಳು ಪುನಾರಂಭಗೊಳ್ಳುವುದರಿಂದ ಎಲ್ಲಾ ಹೋಟೆಲ್ ಸಿಬ್ಬಂದಿ ಮತ್ತು ಅತಿಥಿಗಳಲ್ಲಿ ಸಾಮಾಜಿಕ ಅಂತರ ಕ್ರಮ ಅನುಸರಿಸಬೇಕು. ಅಲ್ಲದೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕೆಂದು ಸೂಚಿಸಲಾಗಿದೆ. ತಾಜ್, ವಿವಾಂತಾ, ಸೆಲೆಕ್ವೆನ್ಸ್ ಮತ್ತು ಜಿಂಜರ್ ಬ್ರಾಂಡ್‌ಗಳನ್ನು ಹೊಂದಿರುವ ಟಾಟಾ ಗ್ರೂಪ್ ಬೆಂಬಲಿತ ಇಂಡಿಯನ್ ಹೋಟೆಲ್ ಕಂಪನಿ (IHCL) ಇತರ ಕ್ರಮಗಳ ನಡುವೆ ಡಿಜಿಟಲ್ ಅಥವಾ ಏಕ-ಬಳಕೆಯ ಮೆನು(single-use menu)ಗಳೊಂದಿಗೆ ಗ್ರಾಹಕರಿಗೆ ಸೇವೆ ನೀಡಲಿವೆ.
ಎಲ್ಲಾ ಸಮಯದಲ್ಲೂ ಸಿಬ್ಬಂದಿ ಸುರಕ್ಷತಾ ಸಾಧನಗಳನ್ನು ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಕಚ್ರು ತಿಳಿಸಿದ್ದಾರೆ.