ಇಟ(ಉತ್ತರ ಪ್ರದೇಶ): ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಮಾಯಾವತಿ ಮತ್ತು ಅಖಿಲೇಶ್ ಅವರ ನಕಲಿ ಸ್ನೇಹ ಅಂತ್ಯವಾಗಲಿದ್ದು, ಮತ್ತೆ ಶತೃಗಳಾಗಿ ಮುಂದುವರೆಯಲಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
-
Congress, SP-BSP have no vision for country: PM Modi
— ANI Digital (@ani_digital) April 20, 2019 " class="align-text-top noRightClick twitterSection" data="
Read @ANI Story | https://t.co/RsR0i64mEY pic.twitter.com/tZ4uLgALan
">Congress, SP-BSP have no vision for country: PM Modi
— ANI Digital (@ani_digital) April 20, 2019
Read @ANI Story | https://t.co/RsR0i64mEY pic.twitter.com/tZ4uLgALanCongress, SP-BSP have no vision for country: PM Modi
— ANI Digital (@ani_digital) April 20, 2019
Read @ANI Story | https://t.co/RsR0i64mEY pic.twitter.com/tZ4uLgALan
ಉತ್ತರ ಪ್ರದೇಶದ ಇಟದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಎಸ್ಪಿ-ಬಿಎಸ್ಪಿ ಮೈತ್ರಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಒಂದು ಸ್ನೇಹ ಹುಟ್ಟಿಕೊಂಡಿತು. ಆ ಸ್ನೇಹ ಫಲಿತಾಂಶದ ನಂತರ ಮುರಿದು ಬಿತ್ತು. ಈಗ ಲೋಕಸಭಾ ಚುಣಾವಣೆ ವೇಳೆ ಮತ್ತೆ ನಕಲಿ ಸ್ನೆಹ ಹುಟ್ಟಿಕೊಂಡಿದೆ.
ಆದ್ರೆ ಮೇ 23ಕ್ಕೆ ಈ ಸೋದರತ್ತೆ(ಮಾಯಾವತಿ), ಸೋದರಳಿಯ (ಅಖಿಲೇಶ್) ತಮ್ಮ ಶತೃತ್ವ ಮುಂದುವರೆಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಇಬ್ಬರು ದಲಿತರು ಮತ್ತು ಹಿಂದುಳಿದವರಿಗಾಗಿ ಏನನ್ನೂ ಮಾಡಲಿಲ್ಲ. ಕೇವಲ ಬಡತನದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.