ಮುಂಬೈ: ಗಾಂಜಾ ಸೇವನೆ ಮತ್ತು ಸಂಗ್ರಹದ ಆರೋಪದಡಿ ಬಂಧಿತರಾಗಿದ್ದ ಬಾಲಿವುಡ್ ಹಾಸ್ಯ ನಟಿ ಭಾರತಿ ಸಿಂಗ್ ಮತ್ತು ಅವರ ಪತಿಗೆ ಡಿಸೆಂಬರ್ 4 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗಾಂಜಾ ಸಂಗ್ರಹ ಮತ್ತು ಸೇವನೆ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿರುವ ಹಾಸ್ಯನಟಿ ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಬಂಧಿಸಿತ್ತು. ಭಾರತಿ ಮತ್ತು ಅವರ ಪತಿ ಇಬ್ಬರೂ ಗಾಂಜಾ ಸೇವನೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಎನ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತಿ ಸಿಂಗ್ ಅವರ ಕಚೇರಿ ಮತ್ತು ಮನೆಯ ಮೇಲೆ ಎನ್‌ಸಿಬಿ ಶನಿವಾರ ದಾಳಿ ನಡೆಸಿದ್ದು, ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.