ಘಾಜಿಯಾಬಾದ್: ಇಲ್ಲಿನ ಮದನ್ ಸಿಂಗ್ ಮೇಲೆ ವ್ಯಕ್ತಿಯೊಬ್ಬ ಬ್ಯಾಟಿನಿಂದ್ ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಭಾನುವಾರ ನಡೆದಿದೆ.
ದಾಳಿ ಮಾಡಿದ ಜಸ್ಬೀರ್ ಸಿಂಗ್ ಮಾಜಿ ಸೈನಿಕ ಎಂದು ತಿಳಿದುಬಂದಿದೆ. ಹಲ್ಲೆ ಬಳಿಕ ಜಸ್ಬೀರ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದನ್ ಸಿಂಗ್ ಭಾನುವಾರ ಪಾರ್ಕ್ನಲ್ಲಿ ವಾಕಿಂಗ್ ಮಾಡುವಾಗ ಜಸ್ಬೀರ್ ಸಿಂಗ್ ಬ್ಯಾಟಿನಿಂದ ಹೊಡೆದಿದ್ದಾರೆ. ಪರಿಣಾಮ ಹೆಚ್ಚುವರಿ ಜಿಲ್ಲಾಧಿಕಾರಿಗೆ ತಲೆ ಗಂಭೀರ ಗಾಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ.
ದಾಳಿ ಮಾಡಿದ ಜಸ್ಬೀರ್ ಸಿಂಗ್ ಅವರನ್ನು 1995ರಲ್ಲಿ ಸೇನೆಯಿಂದ ಅಮಾನತು ಮಾಡಲಾಗಿತ್ತು. ಆ ಬಳಿಕ ಅವರು ಮಾಲ್ವೊಂದರಲ್ಲಿ ಬೌನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಆ ಕೆಲಸ ಕೂಡ ಹೋಗಿತ್ತು. ಇದರಿಂದಾಗಿ ಮಾನಸಿಕವಾಗಿ ಅಸ್ವಸ್ಥನಾಗಿ ಹಲ್ಲೆ ಮಾಡಿರಬಹುದು ಎಂದು ಡಿಸಿ ಅಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡರು, ತನಿಖೆ ಕೈಗೊಂಡಿದ್ದೇವೆ ಎಂದು ಎಸ್ಪಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.