ETV Bharat / bharat

ಸರ್ಕಾರ ರಚನೆಗೆ ಇಂದು ಮಹತ್ವದ ದಿನ: ಪಕ್ಷದ ಶಾಸಕರನ್ನು ಭೇಟಿ ಮಾಡಿದ ಆದಿತ್ಯ ಠಾಕ್ರೆ - Aditya Thackeray latest news

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಗೊಂದಲ ಇನ್ನೂ ಬಗೆಹರಿದಿಲ್ಲ. ಇಂದು ಸರ್ಕಾರ ರಚನೆಗೆ ಮಹತ್ವದ ದಿನವಾಗಿದ್ದು, ಬೆಳಗಾಗುವುದರೊಳಗೆ ಹಿರಿಯ ನಾಯಕರುಗಳು ಓಡಾಟದಲ್ಲಿ ತೊಡಗಿದ್ದಾರೆ.

ಪಕ್ಷದ ಶಾಸಕರನ್ನು ಭೇಟಿ ಮಾಡಿದ ಆದಿತ್ಯ ಠಾಕ್ರೆ
author img

By

Published : Nov 8, 2019, 6:19 AM IST

ಮುಂಬೈ: ಶಿವಸೇನ ನಾಯಕ ಆದಿತ್ಯ ಠಾಕ್ರೆ ಗುರುವಾರ ತಡರಾತ್ರಿ ಪಕ್ಷದ ನೂತನ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮುಂಬೈನ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿರುವ ಪಕ್ಷದ ಶಾಸಕರನ್ನು ಠಾಕ್ರೆ ಭೇಟಿ ಮಾಡಿದ್ದಾರೆ. ಯಾವುದೇ ಹಂತದಲ್ಲಿ ಪಕ್ಷದಿಂದ ಶಾಸಕರು ಕೈತಪ್ಪುವ ಭೀತಿ ಪಕ್ಷಕ್ಕಿದೆ. ಇನ್ನೊಂದೆಡೆ ಪ್ರಸ್ತುತ ಸರ್ಕಾರದ ಅವಧಿ ಇಂದು ಕೊನೆಗೊಳ್ಳುವುದರಿಂದ, ಪಕ್ಷಗಳಿಗೆ ಈ ದಿನ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಶಾಸಕರನ್ನು ಹೋಟೆಲ್​ನಲ್ಲೇ ಉಳಿಸುವ ಸಾಧ್ಯತೆಗಳಿವೆ. ಅಲ್ಲದೆ ಶಿವಸೇನ ಮುಖ್ಯಸ್ಥ ಉದ್ಧವ್​ ಠಾಕ್ರೆ ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆದು, ಮತ್ತೆ ಅದೇ ಹೋಟೆಲ್​ಗೆ ಶಾಸಕರನ್ನು ಶಿಫ್ಟ್​ ಮಾಡಲಾಗುತ್ತದೆ ಎನ್ನಲಾಗಿದೆ.

ವರ್ಲಿ ಕ್ಷೇತ್ರದ ಶಾಸಕ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಗೊಂದಲ ಇನ್ನೂ ಬಗೆಹರಿದಿಲ್ಲ. ಬಿಜೆಪಿ ಜೊತೆಗೆ 50-50 ಸೂತ್ರದ ಹೊರತಾಗಿ ಸರ್ಕಾರ ರಚನೆಗೆ ನಾವು ಒಪ್ಪಲ್ಲ ಎಂಬ ಗಟ್ಟಿ ನಿರ್ಧಾರದಲ್ಲಿ ಶಿವಸೇನೆ ಇದೆ. ಇನ್ನೊಂದೆಡೆ ಎನ್​ಸಿಪಿ ಜೊತೆಗೆ ಮೈತ್ರಿ ಮಾಡಿ ಸರ್ಕಾರ ರಚಿಸೋ ಶಿವಸೇನೆ ಪ್ರಯತ್ನವೂ ವಿಫಲವಾಗಿದೆ. ಹೀಗಾಗಿ ಗೊಂದಲದಲ್ಲಿರುವ ಹಿರಿಯ ನಾಯಕರು ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದಾರೆ. ಅಂತಿಮವಾಗಿ ಬಿಜೆಪಿ ಹಾಗೂ ಶಿವಸೇನ ಮೈತ್ರಿಯಾಗೋ ಸಾಧ್ಯತೆಗಳೇ ದಟ್ಟವಾಗಿದೆ.

Intro:Body:

Aditya Thackeray meets Shiv Sena MLAs

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.