ETV Bharat / bharat

ಸೋನು ಸೂದ್ ವಿರುದ್ಧ ದೂರು: ಶರದ್ ಪವಾರ್​​​​​ ಭೇಟಿ ಮಾಡಿದ ಬಾಲಿವುಡ್ ನಟ - ಶರದ್ ಪವಾರ್​​​​​ ಭೇಟಿ ಮಾಡಿದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲವನ್ನುಂಟು ಮಾಡಿದೆ.

Mumbai
ನಟ
author img

By

Published : Jan 13, 2021, 1:39 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅಕ್ರಮ ವಸತಿ ಕಟ್ಟಡ ನಿರ್ಮಾಣ ಆರೋಪ ಕೇಳಿ ಬಂದಿರುವ ಸಮಯದಲ್ಲೇ, ಅವರು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಹಲವು ಅನುಮಾನಗಳನ್ನು ಮೂಡಿಸಿದೆ.

ಇತ್ತೀಚೆಗಷ್ಟೇ, ಅನುಮತಿಯಿಲ್ಲದೆ ವಸತಿ ಗೃಹವನ್ನು ಹೋಟೆಲ್​ ಆಗಿ ಪರಿವರ್ತಿಸಿದ ಆರೋಪದಡಿ ಸೋನು ಸೂದ್ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​​​​ (ಬಿಎಂಸಿ) ದೂರು ದಾಖಲಿಸಿತ್ತು.

ಬಿಎಂಸಿಯು ಕಟ್ಟಡವನ್ನು ಪರಿಶೀಲಿಸಿ, ಕಳೆದ ಅಕ್ಟೋಬರ್​ನಲ್ಲಿ ನಟನಿ​ಗೆ ನೋಟಿಸ್ ನೀಡಿತ್ತು. ಆದರೂ ಅವರು ಅನಧಿಕೃತವಾಗಿ ಕಟ್ಟಡದ ನಿರ್ಮಾಣವನ್ನು ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ಬಿಎಂಸಿ ಉಲ್ಲೇಖಿಸಿದೆ. ಬಿಎಂಸಿಯ ನೋಟಿಸ್ ಪ್ರಶ್ನಿಸಿ ನಟ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೋವಿಡ್ ಲಾಕ್​ಡೌನ್ ಸಮಯದಲ್ಲಿ ವಲಸಿಗರು ಊರುಗಳನ್ನು ಸೇರಲು ನಟ ಸಹಾಯ ಮಾಡಿ, ದೇಶದ ಗಮನ ಸೆಳೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.