ನವದೆಹಲಿ: ಪಾಕ್ ಆಕ್ರಮಿತ ಪ್ರದೇಶ ಬಾಲಕೋಟ್ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಿಂದ ಪಾಕಿಸ್ತಾನ ಉಭಯ ಸಂಕಟ ಅನುಭವಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೈ ಬಿ ಚೌಕಿದಾರ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಬಾಲಕೋಟ್ನಲ್ಲಿ ಏನಾದರೂ ಆಗಿದೆ ಎಂದು ಹೇಳಿದರೆ ಅಲ್ಲಿ ಉಗ್ರ ನೆಲೆಗಳಿದ್ದವು ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಅದಕ್ಕಾಗಿ ಅಲ್ಲಿ ಏನೂ ಇಲ್ಲವೆಂದು ಪಾಕಿಸ್ತಾನ ಈ ಜಗತ್ತಿಗೆ ಹೇಳುತ್ತಿದೆ. ಆದರೆ ನಾವು ದಾಳಿ ಮಾಡಿದ ಜಾಗಗಳನ್ನು ಅದು ಮುಚ್ಚಿಡಲಾದೀತೆ ಎಂದು ಕುಟುಕಿದರು.
ನಾನು ಏರ್ಸ್ಟ್ರೈಕ್ ಮಾಡಲಿಲ್ಲ. ನಮ್ಮ ಯೋಧರು ಆ ವೀರ ಕೆಲಸ ಮಾಡಿದರು. ಸೇನೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದ್ದುದ್ದರಿಂದಲೇ ಅವರಿಗೆ ದಾಳಿಯ ಆದೇಶ ಮಾತ್ರ ನೀಡಿದ್ದೆ. ಯೋಧರಿಗೆ ನನ್ನ ಸೆಲ್ಯೂಟ್ ಎಂದರು.
40 ವರ್ಷಗಳಿಂದ ನಾವು ಭಯೋತ್ಪಾದನೆಯಿಂದ ನೋವು ಅನುಭವಿಸಿದೆವು. ಉಗ್ರರು ದೇಶದೊಳಗೆ ನುಸುಳಿ ಬಂದು ಮುಂಬೈ, ಉರಿಯಲ್ಲಿ ನರಮೇಧ ನಡೆಸಿದರು. ಇದೆಕ್ಕೆಲ್ಲಾ ಜವಾಬ್ದಾರಿ ಯಾರೆಂದು ನಮಗೆ ಗೊತ್ತು. ಅವರ ವಿರುದ್ಧ ಸಮರ ಸಾರಲು ಅಂದೇ ನಿರ್ಧರಿಸಿದ್ದೇ ಎಂದು ಮೋದಿ ಹೇಳಿದರು.
ಬಾಲಕೋಟ್ ದಾಳಿ ನಡೆದ ಒಂದೂವರೆ ತಿಂಗಳವರೆಗೆ ಪಾಕ್ ಯಾರನ್ನೂ ಆ ಪ್ರದೇಶಕ್ಕೆ ಬಿಡುತ್ತಿರಲಿಲ್ಲ. ಕೆಲವರು ಹೇಳುವಂತೆ, ಅವರು ಆ ಪ್ರದೇಶವನ್ನು ಪುನರ್ ನಿರ್ಮಾಣ ಮಾಡುತ್ತಿದ್ದಾರೆ. ಉಗ್ರರ ತರಬೇತಿ ಕೇಂದ್ರಗಳಿದ್ದರೂ ಅಲ್ಲಿ ಶಾಲೆ ನಡೆಯುತ್ತಿತ್ತು ಎಂದು ಪಾಕಿಸ್ಸುತಾನ ಸುಳ್ಳು ಹೇಳುತ್ತಿದೆ.ಪಾಕ್ಗೆ ಎಷ್ಟು ಮಂದಿ ಉಗ್ರರು ಸತ್ತರು ಎಂಬುದು ಸಮಸ್ಯೆಯಲ್ಲ. ಆದ್ರೆ ಅವರ ಅಡಗುತಾಣಗಳು ಅಲ್ಲಿದ್ದವು ಎಂದು ಒಪ್ಪಿಕೊಳ್ಳುವುದೇ ಸಮಸ್ಯೆ ಎಂದು ಮೋದಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದರು.