ETV Bharat / bharat

ತೆಲಂಗಾಣದಲ್ಲಿ 4.47 ಕೋಟಿ ರೂ. ಅಕ್ರಮ ಹಣ ವಶಪಡಿಸಿಕೊಂಡ ಎಸಿಬಿ!

ತೆಲಂಗಾಣದಲ್ಲಿ 4.47 ಕೋಟಿ ರೂ. ಹಣ ವಶಪಡಿಸಿಕೊಳ್ಳುವಲ್ಲಿ ತೆಲಂಗಾಣ ಎಸಿಬಿ ಯಶಸ್ವಿಯಾಗಿದ್ದಾರೆ.

ACB of Telangana
ACB of Telangana
author img

By

Published : Sep 1, 2020, 9:43 PM IST

ತೆಲಂಗಾಣ: ಬರೋಬ್ಬರಿ 4.47 ಕೋಟಿ ರೂ. ಅಕ್ರಮ ಹಣ ವಶಪಡಿಸಿಕೊಳ್ಳುವಲ್ಲಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಯಶಸ್ವಿಯಾಗಿದೆ. ವೈದ್ಯಕೀಯ ವಿಮಾ ಸೇವೆಗಳ ಮಾಜಿ ನಿರ್ದೇಶಕಿ(ಐಎಂಎಸ್​) ಹಾಗೂ ಮತ್ತೋರ್ವ ಅಧಿಕಾರಿಗೆ ಸೇರಿರುವ ಅಕ್ರಮ ಹಣ ಇದಾಗಿದೆ ಎನ್ನಲಾಗಿದೆ.

ತೆಲಂಗಾಣದಲ್ಲಿ 4.47 ಕೋಟಿ ರೂ. ಅಕ್ರಮ ಹಣ

ದೇವಿಕಾ ರಾಣಿಯವರಿಗೆ ಸೇರಿದ್ದ ಆಧಾರರಹಿತ 3.75 ಕೋಟಿ ರೂ. ಹಾಗೂ ಇಎಸ್​​ಐ ಫಾರ್ಮಸಿಸ್ಟ್​​​ ನಾಗ ಲಕ್ಷಿ ಅವರಿಗೆ ಸೇರಿದ್ದ 72 ಲಕ್ಷ ರೂ ಇದಾಗಿದೆ. ಸೈಬರಾಬಾದ್​​ ಪ್ರದೇಶದ ರಿಯಲ್​ ಎಸ್ಟೇಟ್​​ ಕಂಪನಿಯೊಂದರಲ್ಲಿ ವಾಣಿಜ್ಯ ಮತ್ತು ವಸತಿ ಸ್ಥಳಗಳ ಖರೀದಿಗಾಗಿ ಹೂಡಿಕೆ ಮಾಡಲಾಗಿತ್ತು ಎನ್ನಲಾಗಿದೆ.

ಯಾವುದೇ ರೀತಿಯ ದಾಖಲಾತಿ ಇಲ್ಲದ ಈ ಹಣ ಆರು ವಸತಿ ಫ್ಲ್ಯಾಟ್​​​ ಖರೀದಿಗೆ ಬಳಕೆ ಮಾಡಲಾಗುತ್ತಿತ್ತು. ಇಲ್ಲಿ ನಡೆದಿರುವ ಔಷಧಾಲಯಗಳು ಮತ್ತು ಆಸ್ಪತ್ರೆಗಳಲ್ಲಿನ ಔಷಧಿ ಸರಬರಾಜಿನಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದ್ದು, ಇದರ ತನಿಖೆ ಎಸಿಬಿಯಿಂದ ನಡೆಯುತ್ತಿದೆ. ಈಗಾಗಲೇ ದೇವಿಕಾ ರಾಣಿ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು 2019ರ ಸೆಪ್ಟೆಂಬರ್​ ತಿಂಗಳಲ್ಲಿ ಬಂಧನ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.