ETV Bharat / bharat

ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು: ಇದು ಕೈ ಆಂತರಿಕ ವಿಚಾರ ಎಂದ ಮಾಜಿ ಸಿಎಂ

ಮಧ್ಯಪ್ರದೇಶದಲ್ಲಿನ ರಾಜಕೀಯ ಹೈಡ್ರಾಮ ಹಾಗೂ ಬಂಡಾಯ ವಿಚಾರದ ಬಗ್ಗೆ ಮಾಜಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಮಾತನಾಡಿ ಇದು ಕಾಂಗ್ರೆಸ್​ ಆಂತರಿಕ ವಿಚಾರ, ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ .

Shivraj Singh Chouhan-Kamal Nath
ಶಿವರಾಜ್​ ಸಿಂಗ್​ ಚೌಹಾಣ್-ಕಮಲನಾಥ್
author img

By

Published : Mar 10, 2020, 10:13 AM IST

ಭೋಪಾಲ: ಮಧ್ಯಪ್ರದೇಶದಲ್ಲಿ ಉಂಟಾಗಿರುವ ರಾಜಕೀಯ ಹೈಡ್ರಾಮ ಹಾಗೂ ಬಂಡಾಯ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​, ಇದು ಕಾಂಗ್ರೆಸ್​ ಆಂತರಿಕ ವಿಚಾರ, ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಕಮಲನಾಥ ಆಡಳಿತದ ವಿರುದ್ಧ ಬಂಡಾಯ ಎದ್ದಿರುವ ಕೈನ 16 ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಇದರಲ್ಲಿ ಆರು ಸಚಿವರು ಇದ್ದಾರೆ. ಈ ಹಿನ್ನೆಲೆಯಲ್ಲಿ ಕಮಲ್​ನಾಥ್​ ನಿನ್ನೆ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿದ್ದು, ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಸಮಾಲೋಚಿಸಿದ್ದಾರೆ. ಇನ್ನು ಆರು ಬಿಜೆಪಿ ಶಾಸಕರು ಬೆಂಗಳೂರಿಗೆ ತಲುಪಿದ್ದಾರೆ ಎಂಬ ಸುದ್ದಿ ಇದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಕಮಲನಾಥ್​, ಕಾಂಗ್ರೆಸ್​ ಸರ್ಕಾರ ಸುಭದ್ರವಾಗಿದ್ದು, ಎಲ್ಲ ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಸಿಎಂ ಕಮಲ್​ನಾಥ್​ ತಮ್ಮ ನಿವಾಸದಲ್ಲಿ ತುರ್ತು ಸಭೆ ನಡೆಸಿದ್ದು, ಸದ್ಯದ ಸಮಸ್ಯೆ ಬಗೆಹರಿಸಿ, ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಈ ನಡುವೆ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ 16 ಸಚಿವರು ತಮ್ಮ ರಾಜೀನಾಮೆಯನ್ನ ಕಮಲನಾಥ್ ಅವರಿಗೆ ಸಲ್ಲಿಕೆ ಮಾಡಿದ್ದಾರೆ.

ಇವರೆಲ್ಲರ ರಾಜೀನಾಮೆ ಪಡೆದಿರುವ ಸಿಎಂ ಕಮಲನಾಥ್​, ಅಸಮಾಧಾನ ತಣಿಸಲು ಸಚಿವ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ. ಶೀಘ್ರವೇ ಸಂಪುಟ ರಚನೆ ನಡೆಯಲಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.