ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ರಿಂದ ಪಾಕ್ ಸೇನೆ ಅಮೂಲ್ಯ ಮಾಹಿತಿ ಪಡೆದುಕೊಳ್ಳಲು ಯತ್ನಿಸಿತ್ತು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ವಶಕ್ಕೆ ಪಡೆದ ಸೇನೆ ಅಭಿನಂದನ್ರಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸಿದೆ. ಉನ್ನತ ಸುರಕ್ಷತೆಯ ರೇಡಿಯೋ ತರಂಗಾಂತರಗಳು, ಸೇನೆಯ ನಿಯೋಜನೆ ಹಾಗೂ ಇನ್ನಿತರ ಸೇನಾ ಮಾಹಿತಿಯನ್ನು ಅಭಿನಂದನ್ ಮೂಲಕ ಪಡೆಯಲು ಪಾಕ್ ಹವಣಿಸಿತ್ತು. ಈ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿತ್ತು ಎಂದು ಅಭಿನಂದನ್ ವಿಚಾರಣೆ ನಡೆಸಿದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಪಾಕ್ ವಶದಲ್ಲಿದ್ದ ಸಂದರ್ಭದಲ್ಲಿ ಅಭಿನಂದನ್ರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡಲು ಸೇನೆ ಪ್ರಯತ್ನಿಸಿತ್ತು. ಜೋರಾಗಿ ಹಾಡನ್ನು ಹಾಕುವ ಮೂಲಕ ಮಾನಸಿಕ ಒತ್ತಡ ನೀಡಿತ್ತು ಎಂದು ವಿಚಾರಣೆ ವೇಳೆ ಅಭಿನಂದನ್ ಹೇಳಿದ್ದಾರೆ ಎನ್ನಲಾಗಿದೆ.