ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಉಗ್ರರಿಂದ ರಕ್ಷಿಸಿ ಕರೆತರಲಾಗಿದೆ.
ಪೊಲೀಸ್ ಪೇದೆ ಜಾವೇದ್ ಜಬ್ಬರ್ರನ್ನು ಹಜರತ್ಬಾಲ್ ಪ್ರದೇಶಕ್ಕೆ ನಿಯೋಜನೆ ಮಾಡಲಾಗಿತ್ತು. ರಜೆ ಮೇಲೆ ಶೋಪಿಯಾನ್‌ನಲ್ಲಿರುವ ತಮ್ಮ ಮನೆಗೆ ಜಬ್ಬರ್ ತೆರಳಿದ್ದ ವೇಳೆ ನಿನ್ನೆ ರಾತ್ರಿ ಉಗ್ರರು ಅವರನ್ನು ಅಪಹರಿಸಿದ್ದರು.
ಇದೀಗ ಪೇದೆಯನ್ನು ಉಗ್ರರು ಬಿಡುಗಡೆ ಮಾಡಿದ್ದು, ಅಪಹರಣ ಮಾಡಿದ್ದ ಉಗ್ರರ ಹುಡುಕಾಟದಲ್ಲಿದ್ದೇವೆ ಎಂದು ಜಮ್ಮು- ಕಾಶ್ಮೀರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.