ನವದೆಹಲಿ: 'ಆರೋಗ್ಯ ಸೇತು'. ಕೊರೊನಾ ಸೋಂಕಿತರ, ಶಂಕಿತರ ಚಲನವಲನ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ ಜಿಪಿಎಸ್ ತಂತ್ರಜ್ಞಾನ ಆಧಾರಿತ ಮೊಬೈಲ್ ಆ್ಯಪ್.
ಈ ಆ್ಯಪ್ ಅನ್ನು ಕೇಂದ್ರ ಸರ್ಕಾರ ಮತ್ತಷ್ಟು ಅಭಿವೃದ್ಧಿಪಡಿಸಿದ್ದು ಕನ್ನಡ, ತೆಲುಗು, ಹಿಂದಿ ಇಂಗ್ಲೀಷ್ ಸೇರಿದಂತೆ 11 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಸೋಂಕು ಹರಡುವ, ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ ಸೇರಿದಂತೆ ಹಲವು ಸಲಹೆಗಳು ಈ ಆ್ಯಪ್ನಲ್ಲಿ ಲಭ್ಯವಿವೆ.
-
Government of India launches Aarogya Setu, an App to strengthen our fight against COVID-19. The App will alert users of risk of infection & promote awareness on #COVID19.
— MyGovIndia (@mygovindia) April 2, 2020 " class="align-text-top noRightClick twitterSection" data="
मैं सुरक्षित । हम सुरक्षित । भारत सुरक्षित |
Android: https://t.co/mBUv2Wwgbw
IOS: https://t.co/csD4BvKgmH
">Government of India launches Aarogya Setu, an App to strengthen our fight against COVID-19. The App will alert users of risk of infection & promote awareness on #COVID19.
— MyGovIndia (@mygovindia) April 2, 2020
मैं सुरक्षित । हम सुरक्षित । भारत सुरक्षित |
Android: https://t.co/mBUv2Wwgbw
IOS: https://t.co/csD4BvKgmHGovernment of India launches Aarogya Setu, an App to strengthen our fight against COVID-19. The App will alert users of risk of infection & promote awareness on #COVID19.
— MyGovIndia (@mygovindia) April 2, 2020
मैं सुरक्षित । हम सुरक्षित । भारत सुरक्षित |
Android: https://t.co/mBUv2Wwgbw
IOS: https://t.co/csD4BvKgmH
ಆ್ಯಪ್ ಸಮರ್ಪಕಾಗಿ ಕಾರ್ಯ ನಿರ್ವಹಿಸಬೇಕಾದರೆ ಮೊಬೈಲ್ನ ಬ್ಲೂಟೂತ್ ಮತ್ತು ಜಿಪಿಎಸ್ ಚಾಲನೆಯಲ್ಲಿ ಇರಬೇಕು. ಸೋಂಕಿತರು ಪತ್ತೆಯಾದ ಜಾಗ, ಅವರ ಸಂಪರ್ಕ ಹೊಂದಿರುವರ, ಸೋಂಕಿನ ಅಪಾಯವನ್ನೂ ಸೂಚಿಸುತ್ತದೆ.
ಆರೋಗ್ಯ ಸೇತು ಆ್ಯಪ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ಕೇಳಿ ಬಂದಿತ್ತು. ಹೀಗಾಗಿ ಪ್ರಮುಖ ಶೈಕ್ಷಣಿಕ ಮತ್ತು ಉದ್ಯಮ ತಜ್ಞರು ಸುರಕ್ಷತಾ ದೋಷಗಳನ್ನು ಕಟ್ಟುನಿಟ್ಟಾಗಿ ಪರೀಶೀಲಿಸಿದ್ದಾರೆ. ಅವರು ಆ್ಯಪ್ ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಎನ್‌ಕ್ರಿಫ್ಟ್ ಮಾಡಲಾಗಿದೆ ಮತ್ತು ಸುರಕ್ಷಿತವಾಗಿ ಇರಿಸಿದ್ದಾರೆ.