ನವದೆಹಲಿ: ಮುಂಬರುವ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಎಎಪಿ ಸ್ಪರ್ಧೆ ಮಾಡಲಿದೆ ಎಂದು ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ 9ನೇ ಪರಿಷತ್ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಪರ ಕೆಲಸ ಮುಂದಿಟ್ಟುಕೊಂಡು ತಾವು ಚುನಾವಣೆ ಎದುರಿಸಲಿದ್ದೇವೆ ಎಂದಿದ್ದಾರೆ.
ಓದಿ: ಒಂದೇ ವಾರದಲ್ಲಿ 10 ಲಕ್ಷ ಮಂದಿಗೆ ಕೋವಿಡ್ ವ್ಯಾಕ್ಸಿನ್: ಕೇಂದ್ರ ಆರೋಗ್ಯ ಇಲಾಖೆ
ದೇಶದಲ್ಲಿರುವ ಬೇರೆ ಪಕ್ಷಗಳಿಗೆ ಯಾವುದೇ ದೃಷ್ಠಿಕೋನವಿಲ್ಲ. ಹೀಗಾಗಿ ಆಗಷ್ಟೇ ನಡೆದ ಘಟನೆಗಳ ಬಗ್ಗೆ ಮಾತನಾಡುತ್ತವೆ. ಆದರೆ ಆಮ್ ಆದ್ಮಿ ಪಕ್ಷ ಭವಿಷ್ಯದ ದೃಷ್ಠಿಕೋನವಿಟ್ಟುಕೊಂಡಿದ್ದು, ಅದರ ಬಗ್ಗೆ ವಿಚಾರ ಮಾಡುತ್ತೇವೆ. ಜತೆಗೆ ಪ್ರಾಯೋಗಿಕವಾಗಿ ಜಾರಿಗೆ ತರಲು ಪಕ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು.
ಇದೇ ವೇಳೆ ದೆಹಲಿ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, ಕೃತ್ಯದಲ್ಲಿ ಭಾಗಿಯಾದ ಯಾವುದೇ ಆರೋಪಿಯನ್ನು ಬಿಡಲ್ಲ. ಕಳೆದ 50-60 ದಿನಗಳಿಂದ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಏಕಾಏಕಿಯಾಗಿ ಹಿಂಸಾಚಾರ ನಡೆದಿದೆ. ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದರು.