ETV Bharat / bharat

ಮನೆ ಮನೆಗೆ ಪಡಿತರ​, ಹಿರಿಯರಿಗೆ ಉಚಿತ ತೀರ್ಥಯಾತ್ರೆ: ಎಎಪಿ ಪ್ರಣಾಳಿಕೆಯಲ್ಲಿ ಏನೆಲ್ಲ!

ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯೋಜನೆ ರೂಪಿಸಿಕೊಂಡಿರುವ ಆಮ್​ ಆದ್ಮಿ ಪಕ್ಷ ಇದೀಗ ಪ್ರಣಾಳಿಕೆಯಲ್ಲಿ ಭರಪೂರ ಕೂಡುಗೆ ಘೋಷಣೆ ಮಾಡಿದೆ.

author img

By

Published : Feb 4, 2020, 2:10 PM IST

AAP releases manifesto
ಎಎಪಿ ಪ್ರಣಾಳಿಕೆ ರಿಲೀಸ್​​

ನವದೆಹಲಿ: ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್​ ಹಾಗೂ ಆಡಳಿತ ಪಕ್ಷ ಆಮ್​ ಆದ್ಮಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಮತದಾರ ಪ್ರಭುಗಳನ್ನ ಸೆಳೆಯುವ ದೃಷ್ಟಿಯಿಂದ ಹೊಸ ಹೊಸ ಭರವಸೆ ನೀಡುತ್ತಿವೆ.

ಎಎಪಿ ಪ್ರಣಾಳಿಕೆ ರಿಲೀಸ್​​

ಚುನಾವಣೆಗಾಗಿ ಈಗಾಗಲೇ ಬಿಜೆಪಿ ಪ್ರಣಾಳಿಕೆ ರಿಲೀಸ್​ ಮಾಡಿದ್ದು, ಇದೀಗ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿ, ಭರವಸೆಗಳ ಮಾಹಪೂರವನ್ನೇ ಹರಿಸಿದೆ. 10 ಅಂಶಗಳನ್ನೊಳಗೊಂಡಿರುವ ಪ್ರಣಾಳಿಕೆಯಲ್ಲಿ ವಿದ್ಯುತ್​ ಹಾಗೂ ಕುಡಿವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಳಿದಂತೆ ಶಿಕ್ಷಣ, ಆರೋಗ್ಯಕ್ಕೂ ಗಮನ ನೀಡಲಾಗಿದ್ದು, 24 ಗಂಟೆ ವಿದ್ಯುತ್​ ನೀಡುವ ಭರವಸೆ ನೀಡಿದೆ.

ಪ್ರಮುಖವಾಗಿ ಮನೆ ಮನೆಗೆ ಪಡಿತರ ವಿತರಣೆ ಮಾಡುವ ಯೋಜನೆ ಘೋಷಣೆ ಮಾಡಿರುವ ಆಪ್​, ಪ್ರತಿ ವರ್ಷ 10 ಲಕ್ಷ ಹಿರಿಯ ನಾಗರಿಕರಿಗೆ ಉಚಿತವಾಗಿ ತೀರ್ಥಯಾತ್ರೆ ಮಾಡಿಸುವ ಯೋಜನೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.