ETV Bharat / bharat

ಯುವತಿ ನಿಂದಿಸಿದ್ದಕ್ಕೆ ಪ್ರಶ್ನಿಸಿದ ಯುವಕನ ಬರ್ಬರ ಹತ್ಯೆ - ಮಲ್ಕಾಜಿಗಿರಿ ಜಿಲ್ಲೆಯಲ್ಲಿ ಯುವಕನ ಕೊಲೆ ಸುದ್ದಿ

ಆಕೆಯ ಸಹೋದರ ತನ್ನ ಸ್ನೇಹಿತ ಸುರೇಶ್​ಗೌಡ ಬಳಿ ವಿಷಯವನ್ನು ತಿಳಿಸಿದ್ದಾನೆ. ಈ ಕುರಿತು ಸುರೇಶ್ ಯುವಕನ ಮನೆಗೆ ತೆರಳಿ ಪ್ರಶ್ನಿಸಿದಾಗ, ಯುವಕನ ತಂದೆ ಚಾಕುವಿನಿಂದ ಇರಿದು ಸುರೇಶ್​ ಮೇಲೆ ಹಲ್ಲೆ ಮಾಡಿದ್ದಾರೆ.

ಯುವತಿಯನ್ನು ನಿಂದಿಸಿದ್ದಕ್ಕೆ ಪ್ರಶ್ನಿಸಿದ ಯುವಕನ ಬರ್ಬರ ಹತ್ಯೆ

author img

By

Published : Sep 28, 2020, 11:55 PM IST

ತೆಲಂಗಾಣ: ಮಲ್ಕಾಜಿಗಿರಿ ಜಿಲ್ಲೆಯ ಜೀಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ವಿಮಾನಪುರಿ ಕಾಲೋನಿಯಲ್ಲಿ ಸ್ನೇಹಿತನ ಸಹೋದರಿಯನ್ನು ನಿಂದಿಸಿದ್ದಕ್ಕಾಗಿ ಪ್ರಶ್ನಿಸಲು ಹೋದ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ.

ವಿಮನಾಪುರಿ ಕಾಲೋನಿಯಲ್ಲಿ ವಾಸಿಸುವ ಯುವತಿಯೊಬ್ಬಳು ತನ್ನ ಕರ್ತವ್ಯ ಮುಗಿಸಿ ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಳು. ಈ ವೇಳೆ, ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ಯುವಕರು ಯುವತಿಯನ್ನು ನಿಂದಿಸಿದ್ದಾರೆ.

ಆಕೆಯ ಸಹೋದರ ತನ್ನ ಸ್ನೇಹಿತ ಸುರೇಶ್ ಗೌಡ ಬಳಿ ವಿಷಯವನ್ನು ತಿಳಿಸಿದ್ದಾನೆ. ಈ ಕುರಿತು ಸುರೇಶ್ ಯುವಕನ ಮನೆಗೆ ತೆರಳಿ ಪ್ರಶ್ನಿಸಿದಾಗ, ಯುವಕನ ತಂದೆ ಚಾಕುವಿನಿಂದ ಇರಿದು ಸುರೇಶ್​ ಮೇಲೆ ಹಲ್ಲೆ ಮಾಡಿದ್ದಾರೆ.

ಸುರೇಶ್​ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸುರೇಶ್​ ಸಾವನ್ನಪ್ಪಿದ್ದಾರೆ. ಇದರಿಂದ ಕೋಪಗೊಂಡ ಯುವತಿಯ ಕುಟುಂಬ ಸದಸ್ಯರು ಯುವಕನ ಮನೆಯ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.