ನವದೆಹಲಿ : ಭಾರತದ 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರೈತರ ಗಣತಂತ್ರ ಪರೇಡ್ ಯಾವ ರೀತಿ ಅನಿರೀಕ್ಷಿತವಾಗಿ ಹಿಂಸಾತ್ಮಕ ರೂಪ ಪಡೆಯಿತು.. ಅದ್ಹೇಗೆ ಇಲ್ಲಿದೆ ನೋಡಿ.
ಬೆಳಿಗ್ಗೆ 7: ದೆಹಲಿ-ಹರಿಯಾಣ ಟಿಕ್ರಿ ಗಡಿ : ಬ್ಯಾರಿಕೇಡ್‌ಗಳನ್ನು ಮುರಿದು ರಾಷ್ಟ್ರ ರಾಜಧಾನಿಗೆ ಪ್ರವೇಶಿಸಿದ ರೈತರು.
ಬೆಳಿಗ್ಗೆ 8.30: ದೆಹಲಿ-ಹರಿಯಾಣ ಸಿಂಗು ಗಡಿ : ಬ್ಯಾರಿಕೇಡ್‌ಗಳನ್ನು ಮುರಿದು ಸಾವಿರಾರು ರೈತರು ದೆಹಲಿಗೆ ಪ್ರವೇಶ.
ಬೆಳಿಗ್ಗೆ 9.30: ದೆಹಲಿ-ಉತ್ತರಪ್ರದೇಶ ಗಾಜಿಪುರ ಗಡಿ: ಟ್ರ್ಯಾಕ್ಟರ್ಗಳು, ಮೋಟರ್ ಸೈಕಲ್‌ಗಳು ಮತ್ತು ಕಾರ್ಗಳ ಮೂಲಕ ದೆಹಲಿಗೆ ಪ್ರವೇಶಿಸಿದ ರೈತರು.
ಬೆಳಿಗ್ಗೆ 10: ಸಂಜಯ್ ಗಾಂಧಿ ಸಾರಿಗೆ ನಗರ ಬಳಿ ದೆಹಲಿ ಪೊಲೀಸ್ ಸಿಬ್ಬಂದಿಯೊಂದಿಗೆ ರೈತರ ಘರ್ಷಣೆ. ಸಂಜಯ್ ಗಾಂಧಿ ಸಾರಿಗೆ ನಗರದಲ್ಲಿ ಆಕ್ರೋಶಗೊಂಡ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ.
ಬೆಳಿಗ್ಗೆ 10.30: ಅಕ್ಷರ್ಧಾಮ್ ಬಳಿ ದೆಹಲಿ ಪೊಲೀಸ್ ಸಿಬ್ಬಂದಿಯೊಂದಿಗೆ ರೈತರ ಘರ್ಷಣೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹಾನಿಗೊಳಿಸಿದ ರೈತರು, ಡಿಟಿಸಿ ಬಸ್‌ಗಳಿಗೂ ಹಾನಿ.
ಬೆಳಿಗ್ಗೆ 11: ಪೊಲೀಸರಿಂದ ಅಶ್ರುವಾಯು ಪ್ರಯೋಗ, ಲಘು ಲಾಠಿ-ಚಾರ್ಜ್. ಕತ್ತಿಗಳನ್ನು ಹಿಡಿದು ಶಸ್ತ್ರಸಜ್ಜಿತವಾದ ಕೆಲವು ರೈತರು ಪೊಲೀಸರೊಂದಿಗೆ ಘರ್ಷಣೆ. ರಾಜ್‌ಪತ್‌ನಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆ ಮುಕ್ತಾಯಗೊಳ್ಳುವ ಮೊದಲೇ ನಿಗದಿಪಡಿಸಿದ ಮಾರ್ಗದಿಂದ ವಿಮುಖರಾಗಿ ನಂತರ ಸರೈ ಕೇಲ್ ಖಾನ್ ಕಡೆಗೆ ಸಾಗಿದ ರೈತರು.
ರೈತ ಗಣತಂತ್ರ ರ್ಯಾಲಿಯನ್ನು ಮಧ್ಯಾಹ್ನ 12ರಿಂದ 5ಕ್ಕೆ ನಿಗದಿಪಡಿಸಲಾಗಿತ್ತು.
ಮಧ್ಯಾಹ್ನ 12: ಮುಕರ್ಬಾ ಚೌಕ್ ಬಳಿ ರೈತರು ಹಾಗೂ ಪೊಲೀಸರಗೆ ಘರ್ಷಣೆ. ಮಧ್ಯ ದೆಹಲಿಯ ಐಟಿಒ ಇಂಟರ್ಸೆಕ್ಷನ್ ತಲುಪಿ ವಾಹನಗಳು ಮತ್ತು ಡಿಟಿಸಿ ಬಸ್ಗಳನ್ನು ಹಾನಿಗೊಳಿಸಿದ ರೈತರು. ರೈತರಿಂದ ಪೊಲೀಸ್ ಸಿಬ್ಬಂದಿಯ ಮೇಲೂ ದಾಳಿ. ಪೊಲೀಸರಿಂದ ಹಲವಾರು ಸುತ್ತಿನ ಅಶ್ರುವಾಯು ಮತ್ತು ಅನೇಕ ಸಂದರ್ಭಗಳಲ್ಲಿ ಲಾಠಿಚಾರ್ಜ್.
ಮಧ್ಯಾಹ್ನ 12.30 : ತಮ್ಮ ಟ್ರ್ಯಾಕ್ಟರ್ಗಳೊಂದಿಗೆ ಪೊಲೀಸರನ್ನೇ ಬೆನ್ನಟ್ಟಿದ ರೈತರು. ತಮ್ಮನ್ನು ಪೊಲೀಸರು ಕೆಂಪು ಕೋಟೆಯ ಕಡೆಗೆ ಹೋಗಲು ತಡೆದಿದ್ದಕ್ಕಾಗಿ ಐಟಿಒ ಬಳಿ ಹಲವಾರು ಡಿಟಿಸಿ ಬಸ್ಗಳನ್ನು ಹಾನಿಗೊಳಿಸಿದ ರೈತರು.
ಟ್ರ್ಯಾಕ್ಟರ್ಗಳು, ಬೈಕ್ಗಳು ಮತ್ತು ಕಾರ್ಗಳ ಮೂಲಕ ಕೆಂಪುಕೋಟೆಯ ಪೋರ್ಟಿಕೊವನ್ನು ತಲುಪಿ ಅದರ ಆವರಣವನ್ನು ಪ್ರವೇಶಿಸಿ ಅಪ್ರತಿಮ ಸ್ಮಾರಕದ ಮೊದಲ ಕವಚದಲ್ಲಿ ತಿರಂಗಾ, ಸಿಖ್ ಧಾರ್ಮಿಕ ಚಿಹ್ನೆ ಹೊಂದಿದ ಧ್ವಜ, ರೈತ ಸಂಘದ ಧ್ವಜ ಮತ್ತು ಕೇಸರಿ ಧ್ವಜ ಹಾರಿಸಿದ ರೈತರು.
ಮಧ್ಯಾಹ್ನ 1: ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ನವನೀತ್ ಸಿಂಗ್ ಎಂಬ ರೈತ ಸಾವು. ಆದರೆ, ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಆರೋಪಿಸಿದ ರೈತರು. ಕೆಂಪು ಕೋಟೆಯ ಆವರಣವನ್ನು ಪ್ರವೇಶಿಸಿದ ರೈತರಿಂದ ರೈತ ಸಂಘದ ಧ್ವಜಗಳನ್ನು ತೆಗೆದುಹಾಕಲು ಪ್ರಯತ್ನ.
ಮಧ್ಯಾಹ್ನ 2.30: ಕೆಂಪು ಕೋಟೆ ಬಳಿ ಉದ್ರೇಕಗೊಂಡ ರೈತರಿಂದ ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ, ಕಲ್ಲು ತೂರಾಟ.
ಸಂಜೆ 4.30: ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ತುರ್ತು ಸಭೆ.
ಸಂಜೆ 5: ಬ್ಯಾರಿಕೇಡ್‌ಗಳನ್ನು ಮುರಿಯುತ್ತದ್ದ ರೈತರನ್ನು ತಡೆಯುತ್ತಿದ್ದ ವೇಳೆ ಗಾಯಗೊಂಡ ಹೆಚ್ಚುವರಿ ಡಿಸಿಪಿ (ಪೂರ್ವ) ಮಂಜೀತ್ ಮತ್ತು ಪ್ರೊಬೇಷನರ್ ಐಪಿಎಸ್ ಅಧಿಕಾರಿಗಳು.
ಸಂಜೆ 5.30: ದೆಹಲಿಯನ್ನು ಖಾಲಿ ಮಾಡಿ ಗಡಿಗೆ ಮರಳುವಂತೆ ರೈತರಿಗೆ ಮನವಿ ಮಾಡಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್.
ಸಂಜೆ 6: ಕೆಲವು "ಸಮಾಜ ವಿರೋಧಿ" ಅಂಶಗಳು ತಮ್ಮ "ಶಾಂತಿಯುತ" ಪ್ರತಿಭಟನೆಯಲ್ಲಿ ನುಸುಳಿವೆ ಎಂದ ರೈತ ಸಂಘಗಳು. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ ರೈತ ಸಂಘಟನೆಯಾದ ಸಮುಕ್ತಾ ಕಿಸಾನ್ ಮೋರ್ಚಾ.
ಸಂಜೆ 6.30: ನಂಗ್ಲೋಯಿ ಚೌಕ್‌ನಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಒಡೆದ ರೈತರನ್ನು ಹಿಂದಕ್ಕೆ ತಳ್ಳಲು ಲಾಠಿ ಚಾರ್ಜ್ ನಡೆಸಿದ ಭದ್ರತಾ ಸಿಬ್ಬಂದಿ.
ಸಂಜೆ 7.30: ರೈತರ ಗಣತಂತ್ರ ಪರೇಡನ್ನು ಕೊನೆಗೊಳಿಸುವಂತೆ ಹೇಳಿದ ಸಮುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ). ಎಲ್ಲರೂ ತಕ್ಷಣವೇ ತಮ್ಮ ಪ್ರತಿಭಟನಾ ಸ್ಥಳಗಳಿಗೆ ಮರಳುವಂತೆ ಮನವಿ.