ETV Bharat / bharat

ಡಿಜಿಟಲ್ ಯುಗದಲ್ಲಿ 'ಲೇಖನಿ' ಸ್ನೇಹಿತೆ: ಪಿಯುಸಿ ಬಾಲೆಗೆ ವಿಶ್ವದೆಲ್ಲೆಡೆ ಗೆಳೆಯರು..! - Pen Friend

ಈ ಡಿಜಿಟಲ್ ಯುಗದಲ್ಲಿಯೂ ಕೈಬರಹದ ಮೂಲಕ, ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಜಗತ್ತಿನಾದ್ಯಂತ ಸ್ನೇಹವನ್ನು ಬೆಳೆಸಿದ್ದಾರೆ. ವಿಶ್ವದ ವಿವಿಧ ಭಾಗಗಳಲ್ಲಿನ 43 ದೇಶಗಳಲ್ಲಿ ಆ ಬಾಲೆಗೆ ಸ್ನೇಹಿತರಿದ್ದಾರೆ.

A PUC student has friends all over the world
ಪಿಯುಸಿ ಓದುತ್ತಿರುವ ಬಾಲೆಗೆ ವಿಶ್ವದೆಲ್ಲೆಡೆ ಗೆಳೆಯರ ಬಳಗ
author img

By

Published : Oct 20, 2020, 6:03 AM IST

ಕೇರಳ: ಪಿಯುಸಿ ಓದುತ್ತಿರುವ ಹುಡುಗಿಯೊಬ್ಬಳು ಜಗತ್ತಿನ 43 ಕ್ಕೂ ಹೆಚ್ಚು ದೇಶಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾಳೆ. ಕೇರಳದ ಸುಬ್ಬುಲುಸಲಂ ಹೈಯರ್ ಸೆಕೆಂಡರಿ ಶಾಲೆಯ ರೆಸ್ಬಿನ್ ಎಂಬ ಹದಿಹರೆಯದ ಬಾಲೆ, ವಿಶ್ವದ ಮೂಲೆ ಮೂಲೆಯಲ್ಲಿಯೂ ಚಿರಪರಿತಳು.

ಅಂದ ಹಾಗೆ ನಾವು ರೆಸ್ಬಿನ್ ಅವರ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ಸ್ನೇಹಿತರ ಬಗ್ಗೆ ಹೇಳ್ತಾ ಇಲ್ಲ. ಈ ಡಿಜಿಟಲ್ ಯುಗದಲ್ಲಿಯೂ ಅವರು ಕೈಬರಹದ ಅಕ್ಷರಗಳ ಮೂಲಕ ಜಗತ್ತಿನಾದ್ಯಂತ ಸ್ನೇಹವನ್ನು ಬೆಳೆಸಿದ್ದಾರೆ. ರೆಸ್ಬಿನ್ ತಮ್ಮ ಕಾಗದದ ಕರಕುಶಲ ಛಾಯಾಚಿತ್ರಗಳನ್ನು ಮತ್ತು ಕೆಲವು ಕಲಾಕೃತಿಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅಂದಿನಿಂದ ಈ ಜರ್ನಿ ಶುರುವಾಗಿದೆ. ಒಮ್ಮೆ ಇವರ ಚಿತ್ರಗಳನ್ನು ಇಷ್ಟಪಟ್ಟ ಮೆಕ್ಸಿಕೊದ ಸಾರಾ ಎಂಬ ಯುವತಿ, ಇವರೊಂದಿಗೆ ಮಾತನಾಡಲು ಆಸಕ್ತಿ ತೋರಿಸಿದ್ದಾಳೆ. ಅಂದಿನಿಂದ ಪತ್ರಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಸರಣಿ ಪ್ರಾರಂಭವಾಯಿತು.

ಪಿಯುಸಿ ಓದುತ್ತಿರುವ ಬಾಲೆಗೆ ವಿಶ್ವದೆಲ್ಲೆಡೆ ಗೆಳೆಯರ ಬಳಗ

ರೆಸ್ಬಿನ್ ಅವರು ಸಾರಾಗೆ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರು. ಹೀಗೆ ನಂತರದಲ್ಲಿ ಅಮೆರಿಕ, ಜಪಾನ್, ಬ್ರಿಟನ್, ಇಂಡೋನೇಷ್ಯಾ, ಸ್ಪೇನ್ ದೇಶಗಳಿಂದ ಪತ್ರಗಳ ವಿನಿಮಯ ಶುರುವಾಗಿದೆ. ಈ ಮೂಲಕ ಅವರು ತಮ್ಮ ದಿಗಂತವನ್ನು ಎಲ್ಲೆಡೆ ವಿಸ್ತರಿಸಿದರು. ರೆಸ್ಬಿನ್ ಅಕ್ಷರಗಳಿಗಾಗಿ ಕುತೂಹಲದಿಂದ ಕಾಯುವ ಜನರಿದ್ದಾರೆ. ಈ ಡಿಜಿಟಲ್ ಯುಗದಲ್ಲಿಯೂ ಇವರ ಕೈಬರಹದ ಅಕ್ಷರಗಳನ್ನು ಓದುವ ಸ್ನೇಹಿತರಿದ್ದಾರೆ.

ಪೋಸ್ಟ್‌ ಬಾಕ್ಸ್‌ಗಳಿಂದ ಒಂದು ಪೀಳಿಗೆಯು ಇದೀಗ ಡಿಜಿಟಲ್ ಮಾಧ್ಯಮಗಳಿಗೆ ಕಾಲಿಟ್ಟಿದೆ. ಆದರೆ ರೆಸ್ಬಿನ್ ಅವರು ಇಂದು ಕೈ ಬರಹದಲ್ಲಿ ಭಾವನೆ ತುಂಬಿ ಬರೆದ ಪತ್ರಗಳಿಂದ, ಪ್ರಪಂಚದಾದ್ಯಂತ ಸ್ನೇಹ ಸಂಪಾದಿಸುತ್ತಿದ್ದಾರೆ. ಇದು ನಿಜಕ್ಕೂ ಬಹಳ ರೋಮಾಂಚನಕಾರಿ ಸಂಗತಿ.

ರೆಸ್ಬಿನ್ ಅವರಿಗೆ ವಿಶ್ವದ ವಿವಿಧ ಭಾಗಗಳಲ್ಲಿನ 43 ದೇಶಗಳಲ್ಲಿ, ಸುಮಾರು 15 ರಿಂದ 24 ವರ್ಷದೊಳಗಿನ ಸ್ನೇಹಿತರಿದ್ದಾರೆ. ಅವರಿಂದ ಪತ್ರಗಳು ಮತ್ತು ಸಣ್ಣ ಉಡುಗೊರೆಗಳನ್ನು ಈ ರೆಸ್ಬಿನ್ ಪಡೆಯುತ್ತಿದ್ದಾರೆ. ಇದು ನಿಜಕ್ಕೂ ಒಂದು ಉತ್ತಮ ಬೆಳವಣಿಗೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.