ETV Bharat / bharat

ಸಂಪೂರ್ಣ ಸಂಚಾರ ನಿರ್ಬಂಧ ಸುದ್ದಿ ಸುಳ್ಳು: ಪಿಐಬಿ ಫ್ಯಾಕ್ಟ್​ ಚೆಕ್​​ - ಕೋವಿಡ್​-19

ಭಾರತೀಯ ನಾಗರಿಕರು ಕೊರೊನಾ ಭೀತಿಯಿಂದ ಸದಾಕಾಲ ಮನೆಯಲ್ಲಿಯೇ ಇರಬೇಕೆಂಬ ಯಾವುದೇ ಸುತ್ತೋಲೆಯನ್ನು ಸರ್ಕಾರ ಹೊರಡಿಸಿಲ್ಲ ಎಂದು ಕೇಂದ್ರ ಮಾಹಿತಿ ಇಲಾಖೆಯ ಫ್ಯಾಕ್ಟ್​ ಚೆಕ್​ ಸ್ಪಷ್ಟಪಡಿಸಿದೆ.

pib fact check
ಪಿಐಬಿ ಫ್ಯಾಕ್ಟ್​ ಚೆಕ್​​
author img

By

Published : Mar 19, 2020, 6:06 PM IST

ನವದೆಹಲಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ನಾಗರಿಕರು ಸದಾಕಾಲ ಮನೆಯಲ್ಲಿಯೇ ಇರಬೇಕೆಂಬ ಯಾವ ಸುತ್ತೋಲೆಯನ್ನೂ ಭಾರತ ಸರಕಾರ ಹೊರಡಿಸಿಲ್ಲ ಎಂದು ಕೇಂದ್ರದ ಪ್ರೆಸ್ ಇನ್ಫರ್ಮೇಶನ್ ಬ್ಯೂರೊ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.

ಮಾ.18 ರಿಂದ 31ರವರೆಗೆ ದೇಶದ ಎಲ್ಲ ನಾಗರಿಕರು ಮನೆಯಲ್ಲಿಯೇ ಇರಬೇಕೆಂದು ಸರಕಾರ ಆದೇಶಿಸಿರುವುದಾಗಿ ತಿಳಿಸುವ ಪತ್ರಿಕಾ ಪ್ರಕಟಣೆಯೊಂದು ವಾಟ್ಸ್ಯಾಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಹೀಗಾಗಿ ಜನರಲ್ಲಿ ಸಾಕಷ್ಟು ಗೊಂದಲ ಮೂಡುವಂತಾಗಿತ್ತು.

ಕೇಂದ್ರ ಸರ್ಕಾರ ಇಂಥ ಯಾವುದೇ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿಲ್ಲ. ವಾಟ್ಸ್​ಆ್ಯಫ್​​ನಲ್ಲಿ ಹರಿದಾಡುತ್ತಿರುವ ಚಿತ್ರ ಅಸಲಿಯಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.