ಗುಂಟೂರು: ಅರ್ಧ ಕೋಟಿ ವರದಕ್ಷಿಣೆ ಜೊತೆಗೆ ಕೋಟಿ ಕನಸುಗಳು ಹೊತ್ತುಕೊಂಡು ಮದುವೆ ಮಾಡಿಕೊಂಡ ಯುವತಿಗೆ ಈಗ ಬರೀ ಕಣ್ಣೀರು ಮಾತ್ರ ಉಳಿದಿದೆ.
ಹೌದು, ಗುಂಟೂರು ನಿವಾಸಿಯಾದ ಯುವತಿಗೆ ಇಲ್ಲಿನ ಆರ್ಟಿಸಿ ಕಾಲೋನಿಯ ಎನ್ಆರ್ಐ ಜೊತೆ 50 ಲಕ್ಷ, 55 ಗ್ರಾಂ ಬಂಗಾರ ಜೊತೆ 15 ಲಕ್ಷ ಖರ್ಚು ಮಾಡಿ ಮಾರ್ಚ್ 18ರಂದು ಭರ್ಜರಿ ಮದುವೆ ಮಾಡಿಕೊಡಲಾಗಿತ್ತು. ಮೊದಲನೇ ರಾತ್ರಿಯಲ್ಲೇ ನನಗೆ ಆರೋಗ್ಯ ಸರಿಯಿಲ್ಲ ಎಂದು ಪತ್ನಿಗೆ ಹೇಳಿ ಪತಿ ಹೊರ ನಡೆದಿದ್ದನು. ಬಳಿಕವೂ ಪತ್ನಿ ಜೊತೆಯಲ್ಲಿರಲು ನಿರಾಕರಿಸಿದ್ದಾನೆ. ಇದರಿಂದ ಅನುಮಾನಗೊಂಡ ಪತ್ನಿ ಗಂಡನಿಗೆ ಕೇಳಿದಾಗ ಅಸಲಿಯತ್ತು ಹೊರ ಬಿದ್ದಿದೆ.
‘ಮೂವರು ಎಂಜಾಯ್ ಮಾಡೋಣಾ ಬಾ’
ಕೋಪಗೊಂಡು ಪತ್ನಿ ಗಂಡನನ್ನು ವಿಚಾರಿಸಿದಾಗ ‘ನನಗೆ ಹೆಣ್ಣು ಅಂದ್ರೆ ಇಷ್ಟವಿಲ್ಲ. ಅಮೆರಿಕದಲ್ಲಿ ನನಗೊಬ್ಬ ಬಾಯ್ಫ್ರೆಂಡ್ ಇದ್ದಾನೆ. ಆತನಿಗಾಗಿಯೇ ನಾನು ಮದುವೆ ಮಾಡಿಕೊಂಡಿದ್ದೇನೆ. ಅಮೆರಿಕಕ್ಕೆ ತೆರಳಿದ ನಂತರ ಆತನಿಗೆ ನಿನ್ನನ್ನು ಒಪ್ಪಿಸುವೆ. ನೀನು ಆತನೊಂದಿಗೆ ಸಂಸಾರ ಮಾಡುಬೇಕು. ನಾನು ಸಹ ಆತನೊಂದಿಗೆ ಸುಖಪಡುತ್ತಿದ್ದೇನೆ. ಮೂವರು ಸೇರಿ ಎಂಜಾಯ್ ಮಾಡೋಣ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಹೆಂಡ್ತಿ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾಳೆ.
ವರದಕ್ಷಿಣೆಗಾಗಿಯೇ ಮದುವೆ...!
ನಿನೊಬ್ಬ ನಪುಂಸಕ. ನನ್ನನ್ನೇಕೆ ಮೋಸ ಮಾಡಿದ್ದೀಯಾ ಎಂದು ಕೇಳಿದಾಗ, ವರದಕ್ಷಿಣೆಗಾಗಿ ಮದುವೆ ಮಾಡಿಕೊಳ್ಳುವಂತೆ ಪೋಷಕರು ಒತ್ತಾಯಿಸಿದಕ್ಕೆ ನಾನು ಈ ವಿವಾಹವಾಗಿದ್ದೇನೆ ಎಂದಿದ್ದಾನೆ ಮಹಾಪುರಷ. ಇನ್ನು ಈ ವಿಷಯವನ್ನು ಅತ್ತೆ - ಮಾವ ಮತ್ತು ಗಂಡನ ಕುಟುಂಬಸ್ಥರಿಗೆ ತಿಳಿಸಿದಾಗ ‘ಅವನು ನಿನ್ನೊಂದಿಗೆ ಸಂಸಾರ ಮಾಡುವುದಿಲ್ಲ. ಬೇಕಾದ್ರೆ ನೀನೇ ಒಂದು ಬಾಯ್ಫ್ರೆಂಡ್ ಸೆಲೆಕ್ಟ್ ಮಾಡ್ಕೋ’ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಮತ್ತೆ 10 ಲಕ್ಷ ತೆಗೆದುಕೊಂಡು ಬಾ..
ಇಷ್ಟರಲ್ಲೇ ನನ್ನ ಗಂಡ ಅಮೆರಿಕಕ್ಕೆ ತೆರಳಿದ್ದಾನೆ. ಫೋನ್ ಮಾಡಿದ್ರೂ ರಿಸೀವ್ ಮಾಡುತ್ತಿಲ್ಲ. ನನ್ನ ಮಗನ ಜೊತೆ ಮಾತನಾಡಬೇಕು ಎಂದರೆ 10 ಲಕ್ಷ ತೆಗೆದುಕೊಂಡು ಬಾ ಎಂದು ಅತ್ತೆ ಮನೆಯಿಂದ ನನ್ನನ್ನು ಹೊರ ತಳ್ಳಿದ್ದಾರೆ ಅಂತಾ ನೊಂದ ಯುವತಿ ಆರೋಪಿಸಿದ್ದಾರೆ.
ಪೋಷಕರು ಬೇಸರಗೊಳ್ಳುತ್ತಾರೆಂದು ಈ ವಿಷಯ ನಮ್ಮ ಮನೆಯಲ್ಲಿ ತಿಳಿಸಿಲ್ಲ. ನನಗೆ ಸಾವೇ ಗತಿ. ನ್ಯಾಯ ಒದಗಿಸುವಂತೆ ಪೊಲೀಸರಿಗೆ ಬೇಡಿಕೊಂಡಿದ್ದಾಳೆ ಯುವತಿ. ಪ್ರಕರಣವನ್ನು ತನಿಖೆ ಮಾಡಿ ಯುವತಿಗೆ ನ್ಯಾಯ ಒದಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.