ಪುಧುಕೊಟ್ಟೈ (ತಮಿಳುನಾಡು): ಕಂಧ್ರವಕೋಟೈ ಪ್ರದೇಶದಲ್ಲಿ ಜ್ಯೋತಿಷಿ ಮಾತು ಕೇಳಿ ಮಗಳನ್ನೇ ಬಲಿ ನೀಡಿದ ತಂದೆಯನ್ನು ಮಾನವ ತ್ಯಾಗ (ನರಬಲಿ) ಆರೋಪದಡಿ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾ (13) ಕೊಲೆಯಾದ ಬಾಲಕಿ. ವಿದ್ಯಾ ಹಳ್ಳಿಯಲ್ಲಿ ಕೊಳದಿಂದ ನೀರು ತರುತ್ತಿದ್ದಾಗ ಕೊಲೆ ಮಾಡಲಾಗಿದೆ. ಆಕೆಯ ತಂದೆಯೇ ಈ ಕೃತ್ಯ ಎಸೆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಗಂಡು ಮಗವಿಗಾಗಿ ತಂದೆಯೊಬ್ಬ ಜ್ಯೋತಿಷಿ ಬಳಿ ಹೋಗಿದ್ದಾನೆ. ಜೀವನದ ಕೊನೆಯವರೆಗೂ ನನಗೆ ಗಂಡು ಮಗು ಮಾತ್ರ ಬೇಕಿದೆ. ಹೆಣ್ಣು ಮಗು ಬೇಡ ಎಂದು ಜ್ಯೋತಿಷಿ ಬಳಿ ತನ್ನ ಮನದಿಂಗಿತ ವ್ಯಕ್ತಪಡಿಸಿದ್ದಾನೆ. ಆಗ, ಜ್ಯೋತಿಷಿ, ಅನಾರೋಗ್ಯ ಎಂದು ನೆಪ ಹೇಳಿ ಮಗಳನ್ನು ಕೊಂದು ಬಿಡು ಎಂದು ಸಲಹೆ ಕೊಟ್ಟಿದ್ದಾನೆ. ಜ್ಯೋತಿಷಿಯ ಸಲಹೆಯಂತೆ ತನ್ನ ಸ್ವಂತ ಮಗಳನ್ನೇ ಪಾಪಿ ತಂದೆ, ಕೊಳದಿಂದ ನೀರು ತರುವಾಗ ಹತ್ಯೆ ಮಾಡಿದ್ದಾನೆ.
ಈ ವಿಷಯ ಪೊಲೀಸರಿಗೆ ಗೊತ್ತಾಗಿ, ತನಿಖೆ ಕೈಗೊಂಡ ಪೊಲೀಸರು, ಮಗಳ ಕೊಲೆಯ ಹಿಂದಿನ ರಹಸ್ಯ ಭೇದಿಸಿ ತಂದೆಯನ್ನು ಬಂಧಿಸಿದ್ದು, ಜ್ಯೋತಿಷಿಗಾಗಿ ಶೋಧ ನಡೆಸುತ್ತಿದ್ದಾರೆ.