ETV Bharat / bharat

ಗುಡ್​ ಬೈ 2020: ಜಗತ್ತನ್ನು ಬೆಂಬಿಡದೆ ಕಾಡಿದ ಕೊರೊನಾ.. ವುಹಾನ್‌ ಮಾರ್ಕೆಟ್​ನಿಂದ ಹಳ್ಳಿ ಕಟ್ಟೆಗೆ ಸಾಗಿ ಬಂದದ್ದು ಹೀಗೆ.. - coronavirus spread worldwide

2020ರ ವರ್ಷದ ಉದ್ದಕ್ಕೂ ಜಗತ್ತನ್ನು ಬೆಂಬಿಡದೆ ಕಾಡಿದ್ದು ಕೊರೊನಾ ವೈರಸ್​. ನಲಿವಿಗಿಂತ ಹೆಚ್ಚಾಗಿ ನೋವನ್ನೆ ಕೊಟ್ಟ ವೈರಸ್​ ಅನೇಕ ಸಾವು- ನೋವುಗಳಿಂದ ಮರೆಯಾಗದ ಕಷ್ಟ, ನಷ್ಟ ಅನುಭವಿಸುವಂತೆ ಮಾಡಿದೆ.

coronavirus
ಕೊರೊನಾ
author img

By

Published : Dec 22, 2020, 5:55 PM IST

Updated : Dec 22, 2020, 8:09 PM IST

ನವದೆಹಲಿ: 2020ಕ್ಕೆ ವಿದಾಯ ಹೇಳಿ ಹೊಸ ವರ್ಷದ ಸ್ವಾಗಕತ್ತೆ ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿವೆ. ವರ್ಷದ ಉದ್ದಕ್ಕೂ ಜಗತ್ತನ್ನು ಬೆಂಬಿಡದೆ ಕಾಡಿದ್ದು ಕೊರೊನಾ ವೈರಸ್​. ನಲಿವಿಗಿಂತ ಹೆಚ್ಚಾಗಿ ನೋವನ್ನೆ ಕೊಟ್ಟ ವೈರಸ್​ ಅನೇಕ ಸಾವು- ನೋವುಗಳಿಂದ ಮರೆಯಾಗದ ಕಷ್ಟ, ನಷ್ಟ ಅನುಭವಿಸುವಂತೆ ಮಾಡಿದೆ. 2019ರ ಡಿಸೆಂಬರ್​ನಿಂದ ಇಲ್ಲಿಯ ತನಕ ವೈರಸ್ ಸಾಗಿ ಬಂದ ಪಯಣ ಇಲ್ಲಿದೆ.

2019ರ ಡಿಸೆಂಬರ್ ಆರಂಭಿಕ ದಿನಗಳು

ನ್ಯುಮೋನಿಯಾದ ನಿಗೂಢರೂಪದ ಪ್ರಕರಣಗಳು ಚೀನಾದ ವುಹಾನ್‌ನಲ್ಲಿ ವರದಿಯಾಯಿತು. ಇದೊಂದು ಸಾಧಾರಣ ವೈರಸ್​ನ ಹೊಸ ಸೂಕ್ಷ್ಮಾಣುಜೀವಿ ಎಂದು ಶಂಕಿಸಿ ವೈದ್ಯರು ತಳ್ಳಿಹಾಕಿದರು. ವುಹಾನ್‌ ಸೀಫುಡ್ ಮಾರುಕಟ್ಟೆಯಲ್ಲಿ ಜೀವಂತ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತೆ. ಇಲ್ಲಿ ಕಂಡುಬಂದ ವೈರಸ್​ನಿಂದ ಕೆಲವರು ಬಾಧಿತರಾಗಿ ಸಾವನ್ನಪ್ಪಿದ್ದರು. ಚೀನಾ ಇದನ್ನು ಮುಚ್ಚಿಟ್ಟು, ಇಡೀ ಜಗತ್ತಿಕೆ ಹಬ್ಬಂವತೆ ಮಾಡಿತು.

2019ರ ಡಿಸೆಂಬರ್ 31

ನ್ಯುಮೋನಿಯಾ ಪ್ರಕರಣಗಳ ಬಗ್ಗೆ ಚೀನಾ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಗಮನಕ್ಕೆ ತಂದಿತು. ಇದೇ ವೇಳೆ, ಜನರ ನಡುವೆ ಸೋಂಕು ಹರಡುವ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ ಎಂದು ಅಧಿಕಾರಿಗಳು ಹೇಳಿದರು. ಮರುದಿನ ಸೋಂಕುನಿವಾರಣೆಗಾಗಿ ಹುವಾನಾನ್ ಸೀಫುಡ್ ಮಾರುಕಟ್ಟೆಯನ್ನೇ ಮುಚ್ಚಲಾಯಿತು.

2020ರ ಜನವರಿ 9

ಏಕಾಏಕಿ ಹಬ್ಬಿದ ಸೂಕ್ಷ್ಮಜೀವಿಯನ್ನು ಚೀನಾ, ಹೊಸ ಕೊರೊನಾ ವೈರಸ್ ಅಥವಾ ಕೋವಿಡ್ 19 ಎಂದು ಗುರುತಿಸಿತು. 2002 ರಿಂದ2004ರ ಮಾರಕ SARS ಏಕಾಏಕಿ ಉಂಟಾದ ಅದೇ ರೀತಿಯಲ್ಲಿ ಈ ವೈರಸ್ ಹಬ್ಬಿತು. ತಕ್ಷಣವೇ ಸಂಶೋಧಕರು ಹೊಸ ವೈರಸ್‌ನ ಜೀನೋಮ್‌ನ ಮೊದಲ ಕರಡು ಪ್ರಕಟಿಸಿದರು. ಆನುವಂಶಿಕ ಪರೀಕ್ಷೆಗಳ ಆರಂಭಿಕ ಹಂತ ಅಲ್ಲಿಂದ ಶುರುವಾಯಿತು.

ಇದನ್ನೂ ಓದಿ: 3ನೇ ಹಂತದ ಪ್ರಯೋಗ: 13,000 ಸ್ವಯಂಸೇವಕರ ನೇಮಿಸಿಕೊಂಡ ಭಾರತ್ ಬಯೋಟೆಕ್​

2020ರ ಜನವರಿ ಮಧ್ಯದಲ್ಲಿ

ಹೊಸ ಕೊರೊನಾ ವೈರಸ್ ಚೀನಾದ ಹೊರಗೆ ಹಬ್ಬಲ ಪ್ರಾರಂಭವಾಯಿತು. ಥಾಯ್ಲೆಂಡ್​, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಸೋಂಕಿನ ಪ್ರಕರಣಗಳು ವರದಿಯಾದವು. ವುಹಾನ್‌ನಲ್ಲಿನ ವೈರಸ್​ನಿಂದ ಸೋಂಕು ಹಬ್ಬುತ್ತಿದೆ ಎಂಬುದು ತಿಳಿದು ಬಂತು. ಆದರೆ, ಅವರು ಯಾರೂ ಪ್ರಾಣಿಗಳೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂದು ವರದಿ ಆಯಿತು. ಅದಾಗಲೇ ಸೋಂಕು ಜನರಿಂದ ಜನರಿಗೆ ಹಬ್ಬಲು ಅಡಿಯಿಟ್ಟಿತು.

2020ರ ಜನವರಿ ಕೊನೆಯಲ್ಲಿ

ಪ್ರಾಣಿಗಳಲ್ಲಿ ಹುಟ್ಟಿದ ಹೊಸ ಕೊರೊನಾ ವೈರಸ್ ಈಗ ಜನರ ನಡುವೆ ಹಬ್ಬಿ ಗಡಿಗಳ ಆಚೆಯಲ್ಲಿ ವಿಸ್ತರಿಸಿಕೊಳ್ಳುತ್ತಿತ್ತು. ಡಬ್ಲ್ಯುಎಚ್​ಒ ಜನವರಿ 30ರಂದು ಅಂತಾರಾಷ್ಟ್ರೀಯ ಆರೋಗ್ಯದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿತ್ತು. ಚೀನಾದ ಗಡಿ ದಾಟಿ ಹೋದ ಕೊರೊನಾ 18 ದೇಶಗಳಲ್ಲಿ ಕಾಣಿಸಿಕೊಂಡಿತ್ತು.

2020ರ ಫೆಬ್ರವರಿ

ಆಸ್ಟ್ರಿಯಾ ಮತ್ತು ಇಟಲಿಯ ಸ್ಕೀ ರೆಸಾರ್ಟ್‌ಗಳಲ್ಲಿ ಸೇರಿದ್ದ ಹಲವು ಪ್ರಯಾಣಿಕರು ಸಾಂಕ್ರಾಮಿಕ ರೋಗವನ್ನು ತಮ್ಮೊಂದಿಗೆ ಮನೆಗೆ ಕರೆದೊಯ್ದರು. ಆಸ್ಟ್ರಿಯಾದ ಇಶ್ಗ್​ಲಾ ಎಂಬ ರೆಸಾರ್ಟ್ 45 ದೇಶಗಳ ಸಾವಿರಾರು ಪ್ರಕರಣಗಳಿಗೆ ಮೂಲ ಸ್ಥಾನವಾಯಿತು. ಕೆಲವು ರೆಸಾರ್ಟ್​ಗಳಿಂದ ಬೇರೆಡೆ ತೆರಳಲು ಕಿಕ್ಕಿರಿದ ಬಸ್‌ಗಳಲ್ಲಿ ಪ್ರಯಾಣಿಸಿದರು. ಇದು ಸೋಂಕು ಹಬ್ಬಲು ಮತ್ತಷ್ಟು ಇಂಬು ನೀಡಿದಂತಾಯಿತು.

2020ರ ಮಾರ್ಚ್ 11

ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಕೊರೊನಾವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತು. ಉತ್ತರ ಇಟಲಿಯಲ್ಲಿ ಪ್ರಕರಣಗಳು ಕ್ಷೀಪ್ರಗತಿಯಲ್ಲಿ ಏರಿಕೆಯಾದವು. ಕೆಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಹಾಸಿಗೆಗಳು ಸಾಕಾಗದೆ ರೋಗಿಗಳು ಆಸ್ಪತ್ರೆ ಆವರಣದಲ್ಲಿ ಕಳೆಯಬೇಕಾಯಿತು. ವೆಂಟಿಲೇಟರ್ ಮತ್ತು ಹಾಸಿಗೆ ಹೇಗೆ ಹಂಚಕೆ ಮಾಡಬೇಕು ಎಂಬುದರ ಕುರಿತು ನಿಯಮ ರೂಪಿಸಲಾಯಿತು. ಇದರ ನಡುವೇ ನ್ಯೂಯಾರ್ಕ್​ನ ಆಸ್ಪತ್ರೆಗಳು ಸಹ ಬೆಡ್ ಸಾಕಾಗದೇ ಕೊನೆಯ ಹಂತ ತಲುಪಿದ್ದವು.

202ರ ಮಾರ್ಚ್ ಮಧ್ಯದಲ್ಲಿ

ವೈರಸ್ ಹರಡುವುದನ್ನು ತಡೆಯುವ ಪ್ರಯತ್ನದ ಭಾಗವಾಗಿ ಅನೇಕ ದೇಶಗಳು ಲಾಕ್​ಡೌನ್ ಮೊರೆ ಹೋದವು. ಜನರು ತುರ್ತು ಪರಿಸ್ಥಿತಿ ಹೊರತುಪಡಿಸಿ ಪ್ರಯಾಣಿಸಬಾರದು. ಅಗತ್ಯ ಕೆಲಸಗಳನ್ನು ಮಾತ್ರವೇ ಕೈಗೊಳ್ಳಿ. ಆಹಾರ, ಔಷಧ, ಮತ್ತು ಇತರ ಅಗತ್ಯ ಸರಕುಗಳನ್ನು ಖರೀದಿಸಬೇಕು, ಜನರು ಮನೆಯಲ್ಲಿಯೇ ಇರಬೇಕು ಹೊರ ಬರಬಾರದು ಎಂದು ಆದೇಶಿಸಲಾಯಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ದೇಶವ್ಯಾಪಿ ಲಾಕ್​ಡೌನ್ ಅನ್ನು ಮುಂದಿನ 21 ದಿನಗಳ ಕಾಲ ಘೋಷಿಸಿದ್ದರು.

ಇದನ್ನೂ ಓದಿ: ಯುಕೆಯಲ್ಲಿ ಕೊರೊನಾದ ಹೊಸ ಅಲೆ ಹಿನ್ನೆಲೆ: ಪ್ರಯಾಣಿಕರಿಗೆ ಕ್ವಾರಂಟೈನ್​ ಕಡ್ಡಾಯ

2020ರ ಏಪ್ರಿಲ್

ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಏಷ್ಯಾದ ಕೆಲವು ದೇಶಗಳಲ್ಲಿ ಮನೆಯಿಂದ ಹೊರಬರುವಾಗ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸುವುದು ಕಡ್ಡಾಯ ಎಂಬ ಆದೇಶ ಜಾರಿಗೆ ಬಂತು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಮಾಸ್ಕ್​ ಕಡ್ಡಾಯವಾಗಿ ಧರಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಶಿಫಾರಸು ಮಾಡಿತು.

2020ರ ಜೂನ್ 8

ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಭಾದಿಸಿದ ಕೊರೊನಾ, ನ್ಯೂಜಿಲೆಂಡ್ ಕೋವಿಡ್​-19ನಿಂದ ಮುಕ್ತವಾವೆಂದು ಘೋಷಿಸಿಕೊಂಡಿತು. ಹೆಚ್ಚಿನ ನಿರ್ಬಂಧಗಳನ್ನು ತೆಗೆದುಹಾಕಿತು. ಕಟ್ಟುನಿಟ್ಟಾದ ಕ್ರಮಗಳು ತೆಗೆದುಕೊಂಡರೇ ವೈರಸ್ ಅನ್ನು ತೊಡೆದುಹಾಕಬಲ್ಲವು ಎಂಬುದನ್ನು ಕೀವಿಸ್ ತೋರಿಸಿತ್ತು.

2020ರ ಜೂನ್ ನಡುವೆ

ಪ್ರತಿರಕ್ಷಣಾ ವ್ಯವಸ್ಥೆಯಿಂದ ಪ್ರತಿರೋಧಕ ಪ್ರತಿಕ್ರಿಯೆ ತಣಿಸಲು ಸ್ಟೀರಾಯ್ಡ್ ಔಷಧವಾದ ಡೆಕ್ಸಮೆಥಾಸೊನ್ ಬಳಕೆ ಮಾಡಬಹುದು. ಜೀವಗಳನ್ನು ಉಳಿಸಲು ನೆರವಾಗುತ್ತದೆ ಎಂಬುದು ಕೋವಿಡ್ -19 ವಿರುದ್ಧ ಮೊದಲ ಔಷಧಯಾಗಿ ಬಳಕೆಯಾಯಿತು. ಆಂಟಿವೈರಲ್ ಏಜೆಂಟ್ ರೆಮ್ಡೆಸಿವಿರ್ ಸಹ ಚೇತರಿಕೆಯ ವೇಗ ತೋರಿಸುತ್ತಿದೆ. ಆದರೆ, ಇದು ಅನಿರ್ದಿಷ್ಟ ಪ್ರಮಾಣದಲ್ಲಿ ಇದೆ ಎಂಬ ಅಂಶವನ್ನು ವೈದ್ಯರು ಕಂಡುಕೊಂಡರು. ವೈರಸ್​ ವಿರುದ್ಧ ನಿರ್ಣಾಯಕ ಔಷಧಿ ಹುಡುಕುವ ಪ್ರಯತ್ನಗಳು ಮುಂದುವರಿದವು. ಭಾರತ ಜೂನ್​ 30ರಂದು ಲಾಕ್​ಡೌನ್ ಹೇರಿಕೆಗೆ ಸಡಿಲಿಕೆ ನೀಡಿ ಅನ್​ಲಾಕ್ 1.0 ಘೋಷಿಸಿತು.

ಇದನ್ನೂ ಓದಿ: ಸುಮಾರು 6 ತಿಂಗಳ ಬಳಿಕ ಭಾರತದಲ್ಲಿ ಕೋವಿಡ್​ ಪ್ರಕರಣಗಳ ಗಣನೀಯ ಇಳಿಕೆ

2020ರ ಆಗಸ್ಟ್

ಬೇಸಿಗೆಯಲ್ಲಿನ ಅನೇಕ ಸಾವು-ನೋವುಗಳನ್ನು ಕಂಡ ಅನೇಕ ದೇಶಗಳು ಸೋಂಕಿನ ಪ್ರಕರಣ ಮತ್ತು ಸಾವುಗಳ ಪ್ರಮಾಣ ತಗ್ಗುವುದನ್ನು ಕಂಡು ನಿಟ್ಟುಸಿರು ಬಿಟ್ಟವು. ಅನೇಕ ನಿರ್ಬಂಧಗಳನ್ನು ತೆರವುಗೊಳಿಸಿ ಇಂಗ್ಲೆಂಡ್​ನಲ್ಲಿ ಜನರಿಗೆ ರೆಸ್ಟೋರೆಂಟ್‌ಗಳಿಗೆ ಹೋಗಲು ಪ್ರೋತ್ಸಾಹ ನೀಡಲು ಆಹಾರ ಬಿಲ್‌ಗಳ ಮೇಲೆ ರಿಯಾಯಿತಿಯನ್ನು ಸರ್ಕಾರ ನೀಡಿತು.

2020ರ ಅಕ್ಟೋಬರ್

ಯುರೋಪಿನ ರಾಷ್ಟ್ರಗಳು ಮತ್ತು ಅಮೆರಿಕದ ಕೆಲವು ರಾಜ್ಯಗಳು ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಲೇ ಎರಡನೇ ಅಲೆಯ ಸೋಂಕುಗಳ ಕಾಣಿಸಿಕೊಂಡವು. ಮತ್ತೆ ಲಾಕ್‌ಡೌನ್‌, ಕಠಿಣ ಸಾಮಾಜಿಕ ನಿರ್ಬಂಧ ತರಲಾಯಿತು. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿ ವೈರಸ್ ವಿರುದ್ಧ ಜಯ ಘೋಷಿಸಿಸಿ ಶೂನ್ಯಕ್ಕೆ ತಲುಪಿತು

2020ರ ನವೆಂಬರ್

ಸೋಂಕಿನ ವಿರುದ್ಧ ಔಷಧ ಅಸ್ತ್ರ ಪ್ರಯೋಗಿಸಲು ಡೇ ಒನ್​ನಿಂದ ಸಂಶೋಧನೆಯಲ್ಲಿ ತೊಡಗಿದ್ದ ವೈದ್ಯಕೀಯ ವಿಜ್ಞಾನಿಗಳು ಮೂರು ಲಸಿಕೆ ಮೆಂಬರ್​ಗಳ ಸಕಾರಾತ್ಮಕ ಫಲಿತಾಂಶಗಳನ್ನು ಹಂಚಿಕೊಂಡರು. ಫಿಜರ್ ಮತ್ತು ಬಯೋಟೆಕ್​​ನ ಲಸಿಕೆ, ಮಾಡರ್ನಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಲಸಿಕೆ ಹಾಗೂ ಅಸ್ಟ್ರಾಜೆನೆಕಾದ ಲಸಿಕೆ. ಎರಡು ಎಂಆರ್‌ಎನ್‌ಎ ಅನ್ನು ಆಧರಿಸಿದ್ದು, ಇದು ತನ್ನ ಕೋಶಗಳಿಗೆ ವೈರಸ್‌ನ ಮೇಲ್ಮೈ ಪ್ರತಿರಕ್ಷಣಾ ಪ್ರತಿಕ್ರಿಯೆ ಪ್ರಚೋದಿಸಿ, ಸೋಂಕನ್ನು ಕೊಲ್ಲುತ್ತದೆ.

2020ರ ಡಿಸೆಂಬರ್ ಆರಂಭಿಕ ವಾರ

ಲಸಿಕೆ ಫಲಿತಾಂಶಗಳು ಸಕರಾತ್ಮವಾಗಿ ಕಂಡುಬರುತ್ತಿದಂತೆ ಕೆಲವು ರಾಷ್ಟ್ರಗಳು ತುರ್ತು ಬಳಕೆಗೆ ಅನುಮೋದನೆ ನೀಡಿದವು. ಇದರಿಂದ ಜನರು ಸಂತಸ ಪಡುವ ಮೊದಲೇ ಇಂಗ್ಲೆಂಡ್ ದಕ್ಷಿಣ ಭಾಗದಲ್ಲಿ ಕೊರೊನಾ ವೈರಸ್​ನ ರೂಪಾಂತರ ಕಾಣಿಸಿಕೊಳ್ಳುತ್ತಿದೆ. ಇದರಿಂದ ಬೆಚ್ಚಿನ ನೆರೆಯ ರಾಷ್ಟ್ರಗಳು ಬ್ರಿಟನ್​ನಿಂದ ವಿಮಾನ ಹಾರಾಟಕ್ಕೆ ನಿಷೇಧ ಹೇರಿವೆ. ಭಾರತ, ಸೌದಿ ಸೇರಿದಂತೆ ಯುರೋಪ್ ಹೋರಗಿನ ರಾಷ್ಟ್ರಗಳು ಸಹ ಅದೇ ಹಾದಿ ಹಿಡಿದಿವೆ.

Last Updated : Dec 22, 2020, 8:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.