ತಿರುಪತಿ( ಆಂಧ್ರ ಪ್ರದೇಶ): ಕುಡುಕನೊಬ್ಬ ಫ್ಲೆಕ್ಸಿ ಬ್ಯಾರಿಕೇಡ್ ಹತ್ತಿ ರಂಪಾಟ ನಡೆಸಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ತಿರುಪತಿಯ ರೈಲು ನಿಲ್ದಾಣದ ಮುಂಭಾಗದಲ್ಲಿರುವ ಫ್ಲೆಕ್ಸಿ ಬ್ಯಾರಿಕೇಡ್ ಹತ್ತಿದ್ದ ಯುವಕನನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೂರ್ವ ಪೊಲೀಸ್ ಠಾಣಾ ಸಿಬ್ಬಂದಿ ಹರಸಾಹಸಪಟ್ಟು ಕೆಳಗಿಳಿಸಿದ್ದಾರೆ.
ಯುವಕ ಅಪಾಯದಿಂದ ಪಾರಾಗಿದ್ದು, ಈತನನ್ನು ತಮಿಳುನಾಡಿನ ಕುಂಬಕೋಣಂ ನಗರ ಮೂಲದವನು ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಆತನನ್ನು ತಿರುಪತಿ ಪೂರ್ವ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.