ETV Bharat / bharat

ಕೊರೊನಾ ವಿರುದ್ಧ ಗುದ್ದಾಡಿ ಗೆದ್ದ ಗಟ್ಟಿಗಿತ್ತಿ ಈ 99ರ ಅಜ್ಜಿ! ಇಲ್ಲಿದೆ ಸೀಕ್ರೆಟ್..

ಜಾರ್ಖಂಡ್‌ ರಾಜ್ಯದ​ ಸಾಹಿಬ್​ಗಂಜ್ ಪ್ರದೇಶದನ 99 ವರ್ಷದ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಮನೆಗೆ ಮರಳಿದ್ದಾರೆ.

99-year-old lady beats Corona in sahibganj
ಕೊರೊನಾ ಗೆದ್ದ ಅಜ್ಜಿ
author img

By

Published : Jul 10, 2020, 2:23 PM IST

ಸಾಹಿಬ್​ಗಂಜ್ (ಜಾರ್ಖಂಡ್): ಕೊರೊನಾ ಸೋಂಕು ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ಧರವರೆಗೂ ಯಾರನ್ನೂ ಬಿಡದೆ ಕಾಡುತ್ತಿದೆ. ಈ ಮಧ್ಯೆ ಕೆಲವೆಡೆ ಹಿರಿ ಜೀವಗಳೂ ಕೊರೊನಾ ಗೆದ್ದು ಬರುತ್ತಿರುವ ಸುದ್ದಿಗಳು ಮನಸ್ಸಿಗೆ ಖುಷಿ ನೀಡುತ್ತಿವೆ.

ಕೊರೊನಾ ಸೋಂಕಿನಿಂದ ಅತೀ ಹೆಚ್ಚು ವೃದ್ಧರು ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ ಮತ್ತು ಇತರ ಕಾಯಿಲೆಗಳು ಅಂಟಿಕೊಂಡಿರುವುದು. ಆದರೆ, ಜಾರ್ಖಂಡ್​ನ 99 ವರ್ಷದ ವೃದ್ಧೆಯೊಬ್ಬರು ಕೊರೊನಾ ಗೆದ್ದು ಬಂದು ಅಚ್ಚರಿ ಮೂಡಿಸಿದ್ದಾರೆ.

ಜಾರ್ಖಂಡ್​ ಸಾಹಿಬ್​​ಗಂಜ್​ ಸಕ್ರೋಗರ್​ ಪ್ರದೇಶದ 99 ವರ್ಷದ ದ್ರೌಪದಿ ದೇವಿಯೇ ಕೊರೊನಾ ಗೆದ್ದ ಅಜ್ಜಿ. ಸಾಹಿಬ್​​ಗಂಜ್ ಬಿಹೇವಿಯರ್​ನ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿರುವ ಈಕೆಯ ಹಿರಿಯ ಮಗ ರಾಮ್​ಸ್ವರೂಪ್​ ಚೌರಾಸಿಯಾ ಎಂಬಾತನಿಗೆ ಸೋಂಕು ತಗುಲಿತ್ತು. ಆತನ ಸಂಪರ್ಕದಲ್ಲಿದ್ದ ದ್ರೌಪದಿ ದೇವಿಗೂ ಸೋಂಕು ಹರಡಿತ್ತು. ಹೀಗಾಗಿ ತಾಯಿ, ಮಗ ರಾಜ್​ ಮಹಲ್ ಉಪ ವಿಭಾಗ ವಿಶೇಷ ಕೋವಿಡ್​ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ಇದೀಗ ಎರಡನೇ ವರದಿಯಲ್ಲೂ ವೃದ್ಧೆಗೆ ನೆಗೆಟಿವ್ ಬಂದಿದೆ. ಹೀಗಾಗಿ ವೈದ್ಯರು ಡಿಸ್ಚಾರ್ಜ್​ ಮಾಡಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಅಜ್ಜಿ ಕೊರೊನಾ ಗೆದ್ದು ಮನೆಗೆ ಮರಳುತ್ತಿದ್ದಂತೆ ಕುಟುಂಬಸ್ಥರು ಆರತಿ ಎತ್ತಿ ಬರಮಾಡಿಕೊಂಡರು.

ಈ ಕುರಿತು ಮಾತನಾಡಿರುವ ರಾಮ್​ಸ್ವರೂಪ್ ಚೌರಾಸಿಯಾ, ತಾಯಿಯ ಶಿಸ್ತುಬದ್ಧ ಜೀವನ ಮತ್ತು ಆಹಾರ ಕ್ರಮದಿಂದ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಬೆಳಿಗ್ಗೆ 4 ಗಂಟೆಗೆ ಸ್ನಾನ ಮಾಡಿ ಲಘು ಉಪಹಾರ ಸೇವಿಸಿ ಬಳಿಕ ತುಳಸಿ ರಸವನ್ನು ಸೇವಿಸುತ್ತಾರೆ. ಇದು ಅವರ ಆರೋಗ್ಯಕ್ಕೆ ಅನುಕೂಲವಾಯಿತು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.