ETV Bharat / bharat

12ನೇ ತರಗತಿ ವಿದ್ಯಾರ್ಥಿನಿ ಮೇಲೆ 9 ಕಾಮುಕರಿಂದ ಅತ್ಯಾಚಾರ - ಅತ್ಯಾಚಾರ ಪ್ರಕರಣ

ಕಾಲೇಜ್​ನಿಂದ ಮನೆಗೆ ವಾಪಸ್​ ಆಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.

Rape news
Rape news
author img

By

Published : Feb 3, 2021, 3:21 PM IST

ಜಾಸ್ಪುರ್​​(ಛತ್ತೀಸ್​ಗಡ): ಕಾಲೇಜ್​ನಿಂದ ಮನೆಗೆ ಬರುತ್ತಿದ್ದ 12ನೇ ತರಗತಿ ವಿದ್ಯಾರ್ಥಿನಿ ಮೇಲೆ 9 ಜನ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಛತ್ತೀಸಗಡದ ಜಾಸ್ಪುರ್​ದಲ್ಲಿ ನಡೆದಿದೆ.

ಪಾತಲ್​ಗಾಂವ್​ ಪೊಲೀಸ್ ಠಾಣಾ ಪ್ರದೇಶದಲ್ಲಿ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಆಕೆಯ ಅಪಹರಣ ಮಾಡಿ, ಅತ್ಯಾಚಾರವೆಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಕೈ ಕೊಟ್ಟ ಯುವಕ: ಠಾಣೆ ಮಟ್ಟಿಲೇರಿದ ಯುವತಿ

ಲಭ್ಯವಾಗಿರುವ ಮಾಹಿತಿ ಪ್ರಕಾರ ಕಾಲೇಜ್​ನಲ್ಲಿ ನೀಡಲಾಗಿದ್ದ ಅಸೈನ್​ಮೆಂಟ್​​ ಹಿಂದಿರುಗಿಸಲು ಕಾಲೇಜ್​ಗೆ ತೆರಳಿದ್ದಳು.ಸಂಜೆ ಆಕೆಯ ಸ್ನೇಹಿತನೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದಳು. ಈ ವೇಳೆ, ಆತನಿಗೆ ಬೆದರಿಕೆ ಹಾಕಿ ವಿದ್ಯಾರ್ಥಿನಿಯನ್ನ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ. ಅವರಿಂದ ತಪ್ಪಿಸಿಕೊಂಡ ಬಂದ ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಗ್ರಾಮಸ್ಥರ ಸಹಾಯದಿಂದ ಇಬ್ಬರು ಆರೋಪಿಗಳ ಬಂಧನ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.