ನವದೆಹಲಿ: 2019ರ ಅವಧಿಯಲ್ಲಿ ದೇಶದಲ್ಲಿ ಮಹಿಳೆಯ ಅಪರಾಧ ಕೃತ್ಯಗಳು ಶೇಕಡಾ 7.3 ರಷ್ಟು ಹೆಚ್ಚಳವಾಗಿವೆ. ನಿತ್ಯ ಸರಾಸರಿ 87 ಅತ್ಯಾಚಾರಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ದಳ (ಎನ್‌ಸಿಆರ್‌ಬಿ) ವರದಿ ನೀಡಿದೆ.
ಎನ್‌ಸಿಆರ್‌ಬಿ ಬಿಡುಗಡೆ ಮಾಡಿರುವ 'ಕ್ರೈಮ್ ಇನ್ ಇಂಡಿಯಾ - 2019' ವರದಿಯಲ್ಲಿ 2018ರಲ್ಲಿ 3.78 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಮಾಣ 2019ರಲ್ಲಿ 4.05ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.
ದಾಖಲಾಗಿರುವ ಅಪರಾಧ ಪ್ರಕರಣಗಳ ಪೈಕಿ ಬಹತೇಕ ಭಾರತೀಯ ದಂಡ ಸಂಹಿತೆಯಡಿ ಪತಿ ಅಥವಾ ಪತ್ನಿಯ ವಿರುದ್ಧದ ದೌರ್ಜನ್ಯ ಸಂಬಂಧ ಶೇ.30.9 ರಷ್ಟು ಪ್ರಕರಣಗಳು ದಾಖಲಾಗಿವೆ. ಶೇ.21.84 ರಷ್ಟು ಪ್ರಕರಣಗಳು ತನ್ನ ಅಧೀನದಲ್ಲೇ ಇರಬೇಕೆಂದು ಮಹಿಳೆ ಮೇಳೆ ಹಲ್ಲೆ, ಶೇ.17.9 ರಷ್ಟು ಅಪಹರಣ ಮತ್ತು 7.9 ರಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ಅಂಕಿ ಅಂಶಗಳು ಹೇಳಿವೆ.
2019ರಲ್ಲಿ ಅಪರಾಧ ಪ್ರಕರಣಗಳಲ್ಲಿ 1 ಲಕ್ಷ ಮಹಿಳೆಯರಿಗೆ 62.4 ಮಂದಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. 2018ರಲ್ಲಿ ಈ ಪ್ರಮಾಣ 58.8 ಮಂದಿಯಷ್ಟಿತ್ತು.
ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ. ಹಿಂದಿನ ವರ್ಷ ಮಹಿಳೆಯರ ಸಂಬಂಧಿತ ಒಟ್ಟು 4,05,861 ಪ್ರಕರಣಗಳು ದಾಖಲಾಗಿದ್ದರೆ, 2018ರಲ್ಲಿ 3,78,236 ಪ್ರಕರಣಗಳು ದಾಖಲಾಗಿದ್ದವು. ಉತ್ತರ ಪ್ರದೇಶವೊಂದರಲ್ಲೇ 59,583 ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (41,5550), ಮಹಾರಾಷ್ಟ್ರ (37,144) ರಾಜ್ಯಗಳಿವೆ.
ಯುವತಿಯರಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಕೂಡ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ದಾಖಲಾಗಿವೆ. ಪೊಕ್ಸೊ ಕಾಯ್ದೆಯಡಿ ಇಲ್ಲಿ 7,444 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (6,402) ಮತ್ತು ಮಧ್ಯಪ್ರದೇಶ (6,053) 3ನೇ ಸ್ಥಾನದಲ್ಲಿದೆ.
ಎನ್‌ಸಿಆರ್‌ಬಿ ವರದಿ ಕುರಿತು ಪ್ರತಿಕ್ರಿಯಿಸಿರುವ ಯುಪಿ ಕಾಂಗ್ರೆಸ್ ವಕ್ತಾರ ಅನ್‌ಶು ಅವಸ್ಥಿ, ಸಿಎಂ ಯೋಗಿ ಆದಿತ್ಯನಾಥ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯೋಗಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಹೀಗಾಗಿ ಕ್ರಿಮಿನಲ್‌ಗಳು ಅಪರಾಧ ಕೃತ್ಯಗಳನ್ನು ಸಂಭ್ರಮಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.