ETV Bharat / bharat

ರಾಜಸ್ಥಾನದಲ್ಲಿ ಕೋವಿಡ್​ ಸಂಕಟ: ಇಂದೇ  87 ಹೊಸ ಸೋಂಕಿತರು ಪತ್ತೆ - ರಾಜಸ್ಥಾನ ಕೊರೊನಾ ಅಪ್ಡೇಟ್​

ಜೈಪುರದ ಪಾಲಿಯಲ್ಲಿ 24 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನುಳಿದಂತೆ ಉದಯಪುರದಲ್ಲಿ 12, ರಾಜ್‌ ಸಮಂದ್​ನಲ್ಲಿ 7, ಸ್ವೈ ಮದೋಪುರದಲ್ಲಿ 5, ಕೋಟಾದಲ್ಲಿ 3, ಟೋಂಕ್‌ನಲ್ಲಿ 2 ಮತ್ತು ಬನ್ಸಾವಾರ್‌, ಭರತ್‌ಪುರ ಮತ್ತು ನಾಗೌರ್‌ನಲ್ಲಿ ತಲಾ ಒಂದು ಹೊಸ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದ್ದಾರೆ.

87 fresh cases of coronavirus in Rajasthan
ರಾಜಸ್ಥಾನದಲ್ಲಿ ಇಂದು 87 ಹೊಸ ಕೊರೊನಾ ಪ್ರಕರಣ ದಾಖಲು
author img

By

Published : May 13, 2020, 2:22 PM IST

Updated : May 13, 2020, 2:27 PM IST

ಜೈಪುರ : ರಾಜಸ್ಥಾನದಲ್ಲಿ ಬುಧವಾರ 87 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿವೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4,213ಕ್ಕೆ ತಲುಪಿದೆ. ಈವರೆಗೆ 117 ಮಂದಿ ಸೋಂಕಿಗೆ ಬಲಿಯಾಗಿದ್ದು, ಜೈಪುರದಲ್ಲಿ 60 ಸಾವು ಸಂಭವಿಸಿವೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್​ ಕುಮಾರ್‌‌ಸಿಂಗ್, ಇಂದು ಜೈಪುರದಲ್ಲಿ 32 ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಇಂದು 87 ಹೊಸ ಪ್ರಕರಣಗಳು ದಾಖಲಾಗಿವೆ. ಜೈಪುರದ ಪಾಲಿಯಲ್ಲಿ 24 ಪ್ರಕರಣ ವರದಿಯಾಗಿವೆ. ಇನ್ನುಳಿದಂತೆ ಉದಯಪುರದಲ್ಲಿ 12, ರಾಜ್‌ ಸಮಂದ್​ನಲ್ಲಿ 7, ಸ್ವೈ ಮದೋಪುರದಲ್ಲಿ 5, ಕೋಟಾದಲ್ಲಿ 3, ಟೋಂಕ್‌ನಲ್ಲಿ 2 ಮತ್ತು ಬನ್ಸಾವಾರ್‌, ಭರತ್‌ಪುರ ಮತ್ತು ನಾಗೌರ್‌ನಲ್ಲಿ ತಲಾ ಒಂದು ಹೊಸ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದ್ದಾರೆ.

ಈವರೆಗೆ 2,455 ಜನರ ವರದಿ ನೆಗೆಟಿವ್ ಬಂದಿವೆ. 2,159 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಮತ್ತು 1,641 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಮಾರ್ಚ್ 22 ರಿಂದ ರಾಜ್ಯ ಲಾಕ್‌ಡೌನ್​ನಲ್ಲಿದೆ ಮತ್ತು ಸೋಂಕಿತರನ್ನು ಪತ್ತೆ ಹಚ್ಚಲು ಬೃಹತ್ ಸಮೀಕ್ಷೆ ಮತ್ತು ತಪಾಸಣೆ ನಡೆಯುತ್ತಿದೆ.

Last Updated : May 13, 2020, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.