ETV Bharat / bharat

ಕೊರೊನಾ ಒದ್ದೋಡಿಸಿದ 85 ವರ್ಷದ 22 ಕೆಜಿ ತೂಕದ ವೃದ್ಧೆ.. ಈ ಅದ್ಭುತವೇ ಭಾರತೀಯರ ಶಕ್ತಿ!! - ಲಾಕ್​ಡೌನ್​ ಸುದ್ದಿ

ಈ ಮಹಿಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ಹಠದಿಂದ ಆಸ್ಪತ್ರೆಯ ಸಿಬ್ಬಂದಿ ಸತತವಾಗಿ ಮಹಿಳೆಗೆ ಆರೈಕೆ ಮಾಡಿದ್ದಾರೆ. ಈ ಹಿನ್ನೆಲೆ ಮಹಿಳೆ ಕೊರೊನಾ ಗೆಲ್ಲಲು ಕಾರಣವಾಯಿತು.

85-year-old woman defeats COVID-19, discharged from hospital in Bhubaneswar
ಕೊರೊನಾ ಒದ್ದೋಡಿಸಿದ 85 ವರ್ಷದ 22 ಕೆಜಿ ತೂಕದ ವೃದ್ಧೆ!
author img

By

Published : May 14, 2020, 12:27 PM IST

ಭುವನೇಶ್ವರ : ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ 85 ವರ್ಷದ ಮಹಿಳೆ ಗೆದ್ದು ಬಂದಿದ್ದಾರೆ. ಮಾರಣಾಂತಿಕ ಕಾಯಿಲೆಯಿಂದ ಚೇತರಿಸಿಕೊಂಡ ನಂತರ ಇಲ್ಲಿನ ಕೋವಿಡ್​-19 ಆಸ್ಪತ್ರೆಯಿಂದ ಇವರು ಬಿಡುಗಡೆಗೊಂಡಿದ್ದಾರೆ.

ಕೇವಲ 22 ಕೆಜಿ ತೂಕದ ಜಜ್ಪುರ್ ಜಿಲ್ಲೆಯ ಈ ಮಹಿಳೆ ಕೊರೊನಾ ಸೋಂಕಿಗೆ ಒಳಗಾಗಿದ್ದರು ಮತ್ತು ಚಿಕಿತ್ಸೆಗಾಗಿ ಎಸ್‌ಯುಎಂ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. 12 ದಿನಗಳವರೆಗೆ ಚಿಕಿತ್ಸೆ ಪಡೆದು ಜಯಶೀಲರಾಗಿದ್ದಾರೆ.

ಈ ಮಹಿಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ಹಠದಿಂದ ಆಸ್ಪತ್ರೆಯ ಸಿಬ್ಬಂದಿ ಸತತವಾಗಿ ಮಹಿಳೆಗೆ ಆರೈಕೆ ಮಾಡಿದ್ದಾರೆ. ಈ ಹಿನ್ನೆಲೆ ಮಹಿಳೆ ಕೊರೊನಾ ಗೆಲ್ಲಲು ಕಾರಣವಾಯಿತು. ಈ ಬೆಳವಣಿಗೆ ಇತರ ಕೋವಿಡ್-19 ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನು 3 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ರಾಜ್ಯದ ಜಾಜ್‌ಪುರ ಜಿಲ್ಲೆಯ ಒಟ್ಟು 14 ಜನರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.