ETV Bharat / bharat

ಮೊದಲ ದಿನವೇ ವಿಶೇಷ ರೈಲಿನಲ್ಲಿ 8 ಸಾವಿರ ಮಂದಿ​​ ಪ್ರಯಾಣ: ರೈಲ್ವೆ ಇಲಾಖೆ ಮಾಹಿತಿ - ಕೇಂದ್ರ ರೈಲ್ವೆ ಇಲಾಖೆ

ದೇಶಾದ್ಯಂತ ನಿನ್ನೆಯಿಂದ ವಿಶೇಷ ಪ್ರಯಾಣಿಕ ರೈಲುಗಳ ಓಡಾಟ ಆರಂಭಗೊಂಡಿದ್ದು, ಮೊದಲ ದಿನವೇ ಬರೋಬ್ಬರಿ 8 ಸಾವಿರ ಪ್ರಯಾಣಿಕರು ಪ್ರಯಾಣಿಸಿರುವುದಾಗಿ ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Indian Railways
Indian Railways
author img

By

Published : May 13, 2020, 7:59 AM IST

Updated : May 13, 2020, 8:13 AM IST

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ನಿನ್ನೆಯಿಂದ ವಿಶೇಷ ರೈಲುಗಳ ಸಂಚಾರ ಆರಂಭಗೊಂಡಿದ್ದು, 8 ರೈಲುಗಳು ಪ್ರಯಾಣಿಕರನ್ನು ಅವರ ತವರು ತಲುಪಿಸಿವೆ.

ಛತ್ತೀಸ್​​ಗಢದ ವಿಲಾಸ್​ಪುರ​,ಆಸ್ಸೋಂ ದಿಬ್ರುಗಢ ಹಾಗೂ ಬೆಂಗಳೂರು, ಹೌರಾ, ರಾಜೇಂದ್ರ ನಗರ, ಮುಂಬೈ ಸೆಂಟ್ರಲ್​, ಅಹಮದಾಬಾದ್ ​​ಗೆ ರೈಲುಗಳು ಆರಂಭಗೊಂಡಿವೆ. 8 ರೈಲುಗಳಲ್ಲಿ ಒಟ್ಟು 8 ಸಾವಿರ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

24 ಗಂಟೆಯಲ್ಲಿ 169,039 ಟಿಕೆಟ್​ ಬುಕ್​​​ ಮಾಡಿದ್ದಾಗಿ ಇಲಾಖೆ ಹೇಳಿಕೊಂಡಿದೆ. ಉಳಿದಂತೆ ದೇಶದಲ್ಲಿ ಈಗಾಗಲೇ 575 ಶ್ರಮಿಕ್​ ರೈಲು 680,000 ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಿದ್ದು, ಅವುಗಳ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದೆ.

Last Updated : May 13, 2020, 8:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.