ETV Bharat / bharat

ಇಟಲಿಯಲ್ಲಿ ಮಧ್ಯಪ್ರದೇಶದ 80 ವರ್ಷದ ಬುಡಕಟ್ಟು ಮಹಿಳೆ ರಚಿಸಿದ ಚಿತ್ರ ಪ್ರದರ್ಶನ! - ಬುಡಕಟ್ಟು ಜನಾಂಗ

ಮಧ್ಯ ಪ್ರದೇಶದ ಬುಡಕಟ್ಟು ಜನಾಂಗದ ಸುಮಾರು 80 ವರ್ಷದ ಮಹಿಳೆಯೊಬ್ಬರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅದು ತಮ್ಮ ವಿಶೇಷ ಕಲೆಯ ಮೂಲಕ.

ಬುಡಕಟ್ಟು ಮಹಿಳೆಗೆ ಅಂತರಾಷ್ಟ್ರೀಯ ಮಟ್ಟದ ಗೌರವ
author img

By

Published : Oct 5, 2019, 5:18 PM IST

Updated : Oct 5, 2019, 5:42 PM IST

ಭೋಪಾಲ್​(ಮಧ್ಯ ಪ್ರದೇಶ): ಇಟಲಿಯ ಮಿಲನ್​ನಲ್ಲಿ​ ನಡೆಯುತ್ತಿರುವ ಪ್ರದರ್ಶನವೊಂದರಲ್ಲಿ ಮಧ್ಯಪ್ರದೇಶದ 80 ವರ್ಷ ವಯಸ್ಸಿನ ಬೈಗಾ ಬುಡಕಟ್ಟು ಜನಾಂಗದ ಮಹಿಳೆ ರಚಿಸಿದ ವಿಶೇಷ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿದೆ.

ಮಧ್ಯ ಪ್ರದೇಶದ ಉಮಾರಿಯಾ ಜಿಲ್ಲೆಯ ಲೋಹ್ರಾ ಗ್ರಾಮದ ಜೋಧಯ್ಯ ಬಾಯಿ ಬೈಗಾ, ತಮ್ಮ ಪತಿಯನ್ನು ಕಳೆದುಕೊಂಡ ಬಳಿಕ ಚಿತ್ರಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಳೆದ ನಾಲ್ಕು ದಶಕಗಳಿಂದ ಚಿತ್ರಕಲೆಯಲ್ಲಿ ತೊಡಗಿರುವ ಜೋಧಯ್ಯ, ಕಲೆಗಾಗಿ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡಿದ್ದಾರೆ. ಇವರ ಮನೆಯ ತುಂಬೆಲ್ಲಾ ಇವರು ರಚಿಸಿದ ಚಿತ್ರಗಳನ್ನೇ ಕಾಣಬಹುದು.

80-year-old tribal womans Paintings exhibiting in Italy
ಜೋಧಯ್ಯ ಬಾಯಿ ಬಿಡಿಸಿರುವ ಚಿತ್ರ

ಸದ್ಯ ಇವರು ರಚಿಸಿದ ಚಿತ್ರವೊಂದು ಅಂತರಾಷ್ಟ್ರೀಯ ಪ್ರದರ್ಶನವೊಂದರಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಜೋಧಯ್ಯ ಮತ್ತು ಆದಿವಾಸಿ ಜನಾಂಗದವರ ಸಂತೋಷಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೋಧಯ್ಯ, ನಾನು ನನ್ನ ಸುತ್ತಮುತ್ತಲೂ ಕಂಡುಬರುವ ಪ್ರತಿಯೊಂದನ್ನೂ ಚಿತ್ರದ ರೂಪಕ್ಕೆ ತರುತ್ತೇನೆ. ಚಿತ್ರಕ್ಕಾಗಿ ನಾನು ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ನನಗೆ ಚಿತ್ರಕಲೆಯೇ ಎಲ್ಲಾ. ಈಗಂತೂ ಚಿತ್ರಕಲೆಯನ್ನು ಬಿಟ್ಟರೆ ಬೇರೆ ಪ್ರಪಂಚವೇ ನನಗಿಲ್ಲ. ನನ್ನ ಪತಿಯನ್ನು ಕಳೆದುಕೊಂಡಂದಿನಿಂದ ಚಿತ್ರಕಲೆಯಲ್ಲಿ ತೊಡಗಿದ್ದೇನೆ. ನನ್ನ ಕುಟುಂಬಕ್ಕಾಗಿ ನಾನಿದನ್ನು ಮಾಡಲೇಬೇಕು ಎಂದು ಹೇಳಿಕೊಂಡಿದ್ದಾರೆ.

ಬುಡಕಟ್ಟು ಮಹಿಳೆಗೆ ಅಂತರಾಷ್ಟ್ರೀಯ ಮಟ್ಟದ ಗೌರವ

ನನ್ನ ಚಿತ್ರ ಅಂತರಾಷ್ಟ್ರೀಯ ವೇದಿಕೆಯೊಂದರಲ್ಲಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ ಎಂದು ಜೋಧಯ್ಯ ಸಂತಸಪಟ್ಟಿದ್ದಾರೆ.

Intro:Body:

MP: Paintings of 80-year-old tribal woman on exhibit in Italy

Conclusion:
Last Updated : Oct 5, 2019, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.