ನವದೆಹಲಿ: ಕಾಶ್ಮೀರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಬಳಿಕ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಳವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಅಗಸ್ಟ್ 5ರಿಂದ ನವೆಂಬರ್ 15ರ ಮಧ್ಯೆ 765 ಜನರನ್ನು ಬಂಧಿಸಲಾಗಿದೆ.
ಕಲ್ಲು ತೂರಾಟ ಮತ್ತು ಕಾನೂನು ಉಲ್ಲಂಘನೆಯ ಆಪಾದನೆಯಲ್ಲಿ 190 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜನವರಿ 1ರಿಂದ ಅಗಸ್ಟ್ 4ರ ನಡುವಿನ ಅವಧಿಯಲ್ಲಿ 361 ಪ್ರಕರಣಗಳು ದಾಖಲಾಗಿವೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಪಕೂರ್, ದಿಯೋಘರ್, ಗೊಡ್ಡಾ, ಸಾಹೇಬಗಂಜ್, ಡುಮ್ಕಾ ಮತ್ತು ಜಮ್ತಾಡಾ ಪ್ರದೇಶಗಳು ಸೈಬರ್ ಅಪರಾಧದ ಕೇಂದ್ರವಾಗಿ ಮಾರ್ಪಟ್ಟಿವೆ. ಇದು ಇಡೀ ದೇಶಕ್ಕೆ ಕಳವಳಕಾರಿಯಾಗಲಿದೆ. ಈ ವ್ಯಾಪ್ತಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಒಂದು ಕಚೇರಿ ತೆರೆಯುವ ಅಗತ್ಯವಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಟಿಎಂಸಿ ಈ ರಾಜ್ಯದಲ್ಲಿ ನಕ್ಸಲಿಸಂನ ಬೆಂಬಲಿಸುತ್ತಿವೆ ಎಂದು ಆಪಾದಿಸಿದ ದುಬೆ, ಭಾರತವು ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಜೊತೆ ಗಡಿ ಹಂಚಿಕೊಂಡಿದ್ದರಿಂದ ಅವರ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಆಗುತ್ತಿಲ್ಲ ಎಂದರು.