ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ಗೆ ಕೋವಿಡ್ 19 ಇರುವುದು ದೃಢಪಟ್ಟಿದ್ದು, 72 ಕುಟುಂಬಗಳಿಗೆ ಸೆಲ್ಫ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಮಾಲ್ವಿಯಾ ನಗರ ಪ್ರದೇಶದ ಪ್ರಸಿದ್ಧ ರೆಸ್ಟೋರೆಂಟ್ ಒಂದರ ಪಿಜ್ಜಾ ಕೇಂದ್ರದ ಡೆಲಿವರ್ ಬಾಯ್ಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿತ್ತು. ಹೀಗಾಗಿ ಆತನೊಂದಿಗೆ ಕೆಲಸ ಮಾಡುವ 16 ಮಂದಿ ಸಹುದ್ಯೋಗಿಗಳನ್ನು ಹಾಗೂ ಸೋಂಕಿತ ಡೆಲಿವರಿ ಮಾಡಿದ್ದ 72 ಮನೆಗಳ ಸದಸ್ಯರನ್ನು ಸೆಲ್ಫ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ದಕ್ಷಿಣ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಎಂ. ಮಿಶ್ರಾ ತಿಳಿಸಿದ್ದಾರೆ.
ಸೋಂಕಿತ ಡೆಲಿವರಿ ಬಾಯ್ನನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈತನ ಪಿಜ್ಜಾ ಕೇಂದ್ರದಿಂದ ಜೊಮಾಟೊ ಮೂಲಕ ಕೂಡ ಆರ್ಡರ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರೆಸ್ಟೋರೆಂಟ್ನಲ್ಲಿ ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.