ETV Bharat / bharat

70ರ ಹರೆಯದಲ್ಲಿ 40ಕ್ಕೂ ಹೆಚ್ಚು ಶ್ವಾನಗಳನ್ನು ಸಾಕುತ್ತಿದ್ದಾರೆ ಈ 'ಅಮ್ಮ'..! - ಕೇರಳ ಸುದ್ದಿ

ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಅಮ್ಮಿನಿ ಅಮ್ಮ ಎಂಬ 70 ವರ್ಷದ ವೃದ್ಧೆ ಸುಮಾರು 40ಕ್ಕೂ ಹೆಚ್ಚು ಬೀದಿನಾಯಿಗಳನ್ನು ಸಾಕಿ ಸಲುಹಿದ್ದಾರೆ.

ಬೀದಿನಾಯಿಗಳನ್ನು ಮಕ್ಕಳಂತೇ ಸಾಕುತ್ತಿರುವ ಅಮ್ಮಿನಿ ಅಮ್ಮ

author img

By

Published : Oct 1, 2020, 4:37 PM IST

ಕೊಟ್ಟಾಯಂ(ಕೇರಳ): ಜಿಲ್ಲೆಯ ಕೋಡಿಮತ್ತಾ ಎಂಬಲ್ಲಿನ 70 ವರ್ಷದ ವೃದ್ಧೆ ಸುಮಾರು 40ಕ್ಕೂ ಹೆಚ್ಚು ಬೀದಿನಾಯಿಗಳನ್ನು ಸಾಕಿ ಸಲುಹಿದ್ದಾರೆ.

ಅಮ್ಮಿನಿ ಅಮ್ಮ ಎಂಬ ವೃದ್ಧೆ ತನ್ನ 70ರ ವಯಸ್ಸಿನಲ್ಲೂ ಶ್ವಾನಗಳಿಗೆ ಪ್ರೀತಿ ತೋರುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡ ಶ್ವಾನಗಳನ್ನು ಕರೆತಂದು ಅವುಗಳನ್ನು ಆರೈಕೆ ಮಾಡಿ ಸಾಕುತ್ತಾರೆ. ಅಮ್ಮಿನಿ ಅಮ್ಮ ಬೀದಿ ನಾಯಿಗಳನ್ನು ಪ್ರೀತಿಸಲು ಮತ್ತು ಅವುಗಳನ್ನು ನೋಡಿಕೊಳ್ಳಲು ಪ್ರಾರಂಭಿಸಿ 12 ವರ್ಷಗಳಾಗಿವೆ. ವಸತಿ ಪ್ರದೇಶಗಳಲ್ಲಿ ನಾಯಿಗಳು ಸೃಷ್ಟಿಸುವ ತೊಂದರೆಯಿಂದ ಅವುಗಳನ್ನು ನಿಯಂತ್ರಿಸುವ ಸಲುವಾಗಿ ಕಾರ್ಪೊರೇಷನ್ ಕಾರ್ಮಿಕರು ಬೀದಿನಾಯಿಗಳನ್ನು ಕೊಲ್ಲುತ್ತಿದ್ದರು. ಅದನ್ನು ಕಂಡ ಅಮ್ಮಿನಿ ಅವರು ಈ ಬೀದಿ ಶ್ವಾನಗಳನ್ನು ತಂದು ಸಾಕುತ್ತಿದ್ದಾರೆ.

ಬೀದಿನಾಯಿಗಳನ್ನು ಮಕ್ಕಳಂತೆ ಸಾಕುತ್ತಿರುವ ಅಮ್ಮಿನಿ ಅಮ್ಮ

ಸ್ವಂತ ಮಕ್ಕಳಂತೆ ಪ್ರೀತಿಸುತ್ತಾ, ಅವುಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಶ್ವಾನಗಳನ್ನು ಸಾಕುತ್ತಾರೆಂದು ತಿಳಿದ ಬಳಿಕ ಅಲ್ಲಿನ ಜನರು ನಾಯಿಮರಿಗಳನ್ನು ಬೀದಿಯಲ್ಲಿ ಬಿಡದೆ ಇವರ ಮನೆ ಬಳಿಗೆ ತಂದು ಬಿಡುತ್ತಿದ್ದಾರೆ. ಅಮ್ಮಿನ ತಮ್ಮ ಮಗಳ ಜೊತೆ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಮಗಳು ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದು, ಬರುವ ಅಲ್ಪಸ್ವಲ್ಪ ಆದಾಯದಲ್ಲಿ ತಮ್ಮ ಜೀವನದ ಜೊತೆಗೆ ನಾಯಿಗಳ ಅರೈಕೆ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.