ಪಂಚಕುಲ(ಹರಿಯಾಣ): ಕೇವಲ 24 ಗಂಟೆಗಳಲ್ಲಿ 70 ಹಸುಗಳು ಮೃತಪಟ್ಟು, 30 ಹಸುಗಳು ಅಸ್ವಸ್ಥವಾಗಿರುವ ಘಟನೆ ಪಂಚಕುಲ ಬಳಿಯ ಮಾತಾ ಮಾನಸದೇವಿ ಗೋಶಾಲೆಯಲ್ಲಿ ನಡೆದಿದೆ.
ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ವೈದ್ಯರು ತಪಾಸಣೆ ನಡೆಸಿದ್ದು, ವಿಷಯುಕ್ತ ಆಹಾರವೇ ಹಸುಗಳ ಮರಣಕ್ಕೆ ಕಾರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಸ್ವಸ್ಥ ಹಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜೊತೆಗೆ ನಿಖರ ಕಾರಣ ತಿಳಿಯಲು ಕೆಲವು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯ ಅನಿಲ್ ಪರೀಕ್ಷಾ ವರದಿ ಬಂದ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಇದು ಸಾಂಕ್ರಾಮಿಕ ರೋಗವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಸದ್ಯಕ್ಕೆ ಮೃತ ಹಸುಗಳನ್ನು ಗೋಶಾಲೆಯಿಂದ ಹೊರಗೆ ತೆಗೆಯಾಗಿದ್ದು, ಅಸ್ವಸ್ಥ ಹಸುಗಳಿಗೆ ಚಿಕಿತ್ಸಾ ಕಾರ್ಯ ಮುಂದುವರೆದಿದೆ.