ETV Bharat / bharat

ಕೊರೊನಾಗೆ ಜೈಪುರದಲ್ಲಿ ಮತ್ತೊಬ್ಬ ಮಹಿಳೆ ಸಾವು: ರಾಜಸ್ಥಾನದಲ್ಲಿ 8ಕ್ಕೇರಿದ ಸಾವಿನ ಸಂಖ್ಯೆ

author img

By

Published : Apr 10, 2020, 12:43 PM IST

ಜೈಪುರದ ರಾಮಗಂಜ್ ಮೂಲದ ಈಕಯನ್ನು ಅಸ್ವಸ್ಥತೆ, ಅಧಿಕ ರಕ್ತದೊತ್ತಡ ಹಾಗೂ ಉಸಿರಾಟದ ತೊಂದರೆ ಹಿನ್ನೆಲೆ ಬುಧವಾರ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಜಸ್ಥಾನದಲ್ಲಿ 8ಕ್ಕೇರಿದ ಸಾವಿನ ಸಂಖ್ಯೆ
ರಾಜಸ್ಥಾನದಲ್ಲಿ 8ಕ್ಕೇರಿದ ಸಾವಿನ ಸಂಖ್ಯೆ

ಜೈಪುರ: 65 ವರ್ಷದ ಮಹಿಳೆ ಕೊರೊನಾದಿಂದ ಮೃತಪಟ್ಟಿದ್ದು, ರಾಜಸ್ಥಾನದಲ್ಲಿ ಈವರೆಗೆ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 8 ಕ್ಕೆ ಏರಿದೆ.

ಈಕೆಗೆ ಎಸ್​ಎಂಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಈಕೆ ನಿನ್ನೆ ಸಂಜೆ ತನ್ನ ಹುಸಿರಾಟ ನಿಲ್ಲಿಸಿದ್ದಾಳೆ. ಜೈಪುರದ ರಾಮಗಂಜ್ ಮೂಲದ ಈಕೆಯನ್ನು ಅಸ್ವಸ್ಥತೆ, ಅಧಿಕ ರಕ್ತದೊತ್ತಡ ಹಾಗೂ ಉಸಿರಾಟದ ತೊಂದರೆ ಹಿನ್ನೆಲೆ ಬುಧವಾರ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆಯನ್ನು ಪರೀಕ್ಷೆ ಮಾಡಿದ ನಂತರ ಕೊರೊನಾ ಪಾಸಿಟಿವ್​ ಕಂಡುಬಂದಿದೆ. ಹೀಗಾಗಿ ಈಕೆಯನ್ನು ವೆಂಟಿಲೇಟರ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ರಾಮಗಂಜ್​ನಲ್ಲಿ ಕೊರೊನಾಗೆ ಬಲಿಯಾದ ಮೊದಲನೇ ವ್ಯಕ್ತಿ ಇವರಾಗಿದ್ದಾರೆ. ಭಾನುವಾರ ಘಾಟ್ ಗೇಟ್‌ನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.ರಾಜ್ಯದಲ್ಲಿ ಈವರೆಗೆ ಒಟ್ಟು 463 ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡುಬಂದಿದ್ದು, ಅವರಲ್ಲಿ 168 ಮಂದಿ ಜೈಪುರದವರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.