ಲಲಿತ್ಪುರ (ಉತ್ತರಪ್ರದೇಶ): 65 ವರ್ಷದ ದಲಿತ ವ್ಯಕ್ತಿಗೆ ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ಅಮಾನವೀಯ ಘಟನೆ ಲಲಿತ್ಪುರದಲ್ಲಿ ನಡೆದಿದೆ.
ಸೋನು ಯಾದವ್ ಎಂಬಾತ ಅಮರ್ ಎಂಬ ವ್ಯಕ್ತಿಗೆ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದು, ನಿರಾಕರಿಸಿದಾಗ ದೊಣ್ಣೆಯಿಂದ ಥಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಶ್ನಿಸಲು ಹೋದ ವೃದ್ಧನ ಮಗನಿಗೂ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.
ದೂರು ಹಿಂಪಡೆಯಲು ವೃದ್ಧ ಹಾಗೂ ಅವನ ಮಗನ ಮೇಲೆ ಸೋನು ಒತ್ತಡ ಹೇರುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಪುರ ಎಸ್ಪಿ ಮಿರ್ಜಾ ಮಂಜಾರ್ ಬೇಗ್, ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆ ಹಿಂದಿರುವ ಇನ್ನಿತರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದರು.