ಲಖನೌ(ಉತ್ತರ ಪ್ರದೇಶ): ಉತ್ತರಪ್ರದೇಶದಲ್ಲಿ ತಪಾಸಣೆ ನಡೆಸಿದ ನಂತರ ಲಖನೌ ಮೂಲದ 157 ಮಂದಿ ಸೇರಿದಂತೆ 600 ಕ್ಕೂ ಹೆಚ್ಚು ತಬ್ಲಿಘಿ ಜಮಾತ್ ಸದಸ್ಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಳಿದ ತಬ್ಲಿಘಿಗಳನ್ನು ತಮ್ಮ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅವನೀಶ್ ಅವಸ್ಥಿ ತಿಳಿಸಿದ್ದಾರೆ. ಪ್ರಯಾಣದ ನಿಯಮಗಳು ಮತ್ತು ಇತರ ವಿಷಯಗಳ ಉಲ್ಲಂಘನೆ ಕಾರಣದಿಂದ ಬಂಧನಕ್ಕೊಳಗಾದ ತಬ್ಲಿಘಿಗಳಿಗೆ ಜಾಮೀನು ದೊರೆತ ನಂತರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಮೀರತ್ನ ವಿವಿಧ ಕ್ವಾರಂಟೈನ್ ಕೇಂದ್ರಗಲ್ಲಿ 50 ದಿನ ಸಂಪರ್ಕ ತಡೆಯಲ್ಲಿ ಇರಿಸಲಾಗಿದ್ದ 296 ತಬ್ಲಿಘಿಗಳನ್ನು ಬಿಡುಗಡೆ ಮಾಡಲಾಗಿದೆ. ತಬ್ಲಿಘಿಗಳನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಹೆಚ್ಚು ಕಾಲ ಉಳಿಯುವಂತೆ ಮಾಡಲಾಗಿದೆ ಎಂದು ಸಮಾಜವಾದಿ ಶಾಸಕ ರಫೀಕ್ ಅನ್ಸಾರಿ ಹೇಳಿದ್ದಾರೆ.
ಕ್ವಾರಂಟೈನ್ ಅವಧಿ 28 ದಿನಗಳವರೆಗೂ ಮುಂದುವರೆಯಬಹುದು. ಜಿಲ್ಲಾಡಳಿತ, ಅವರ ಬಿಡುಗಡೆಯ ಮಾರ್ಗಸೂಚಿಗಳಿಗಾಗಿ ಕಾಯುತ್ತಿತ್ತು. ಹೀಗಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಹೆಚ್ಚುದಿನ ಕಳೆಯುವಂತಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ರಾಜ್ ಕುಮಾರ್ ಹೇಳಿದ್ದಾರೆ.