ಪಾಟ್ನಾ (ಬಿಹಾರ): ಆನ್ಲೈನ್ ಶಿಕ್ಷಣ ಇತ್ತೀಚಿನ ಅನಿವಾರ್ಯತೆಯಾಗಿದ್ದು, ಈ ನೂತನ ಶಿಕ್ಷಣಕ್ಕೆ ಹೊಂದಿಕೊಳ್ಳಲು ಕೆಲವು ಸಮುದಾಯಗಳಿಗೆ ಸಾಧ್ಯವಾಗುತ್ತಿಲ್ಲ. ಬಿಹಾರದ ರಾಜಧಾನಿ ಪಾಟ್ನಾದಿಂದ 372 ಕಿಲೋಮೀಟರ್ ದೂರದಲ್ಲಿರುವ ಪೂರ್ನಿಯಾ ಜಿಲ್ಲೆಯಲ್ಲಿ ಡಿಜಿಟಲ್ ಶಿಕ್ಷಣ ಅಂದ್ರೆ ಆನ್ಲೈನ್ ಶಿಕ್ಷಣ ಎರಡು ವಿಭಿನ್ನ ಸಮುದಾಯಗಳನ್ನು ಸೃಷ್ಟಿಮಾಡಿದೆ.
ಈ ಜಿಲ್ಲೆಯಲ್ಲಿ ಒಟ್ಟು ಸಾಕ್ಷರತೆ ಪ್ರಮಾಣ ಶೇಕಡಾ 51ರಷ್ಟಿದ್ದು, ಆರ್ಥಿಕವಾಗಿಯೂ ತುಂಬಾನೇ ಹಿಂದುಳಿದಿದೆ. ಇದೇ ಜಿಲ್ಲೆಯಲ್ಲಿ ಬರುವ ಭಾಂಗಿ ತೋಲಾ ಎಂಬ ಗ್ರಾಮದಲ್ಲಿ 50 ರಿಂದ 60 ಕುಟುಂಬಗಳಿವೆ. ಈ ಗ್ರಾಮದಲ್ಲಿರೋ ಶೇಕಡಾ 30ರಷ್ಟು ಮಕ್ಕಳು ಶಾಲೆಯ ಮೆಟ್ಟಿಲೇರಿಲ್ಲ. ಇನ್ನು ಶಾಲೆಗೆ ಹೋಗುತ್ತಿರುವವರ ಪರಿಸ್ಥಿತಿ ಕೂಡಾ ಬೇರೆಯೇ ಇದೆ.
ಈ ಕುಟುಂಬಗಳಲ್ಲಿರೋ ಮಕ್ಕಳಿಗೆ ಶಿಕ್ಷಣ ಪೂರ್ಣಗೊಳಿಸೋದು ಕನಸಿನ ಮಾತು. ಇಲ್ಲಿನ ಬಹುಪಾಲು ಮಂದಿಗೆ ಸರ್ಕಾರದ ವಿವಿಧ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ತಿಂಗಳಿಗೆ ಏಳೆಂಟು ಸಾವಿರ ರೂಪಾಯಿ ಸಂಬಳ ಆಯಾ ಕೆಲಸವೇ ಖಾಯಂ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ತಳಮಟ್ಟದಲ್ಲಿ ವಾಸ್ತವ ಬೇರೆ ಇನ್ನೂ ಕ್ರೂರವಾಗಿದ್ದು, ಆನ್ಲೈನ್ ಕ್ಲಾಸ್ಗಳಿಗೆ ಬೇಕಾದ ಸಾಮಗ್ರಿಗಳನ್ನು ಕೊಂಡು ಕೊಳ್ಳುವ ಪರಿಸ್ಥಿತಿಯಲ್ಲೂ ಕೂಡಾ ಅಲ್ಲಿನ ಜನರಿಲ್ಲ.
ಇಂದಿನ ಶಿಕ್ಷಣ ಗುಣಮಟ್ಟದಿಂದ ಕೂಡಿದ್ದಾಗ ಮಾತ್ರ ಮುಂದಿನ ಸಾಕ್ಷರ, ವಿದ್ಯಾವಂತ ಭಾರತ ನಿರ್ಮಾಣವಾಗುತ್ತದೆ. ಆನ್ಲೈನ್ ಶಿಕ್ಷಣ ಅನಿವಾರ್ಯತೆ ಇದ್ರೂ ಸರ್ಕಾರ ಅದರಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಗಮನ ಕೇಂದ್ರೀಕರಿಸಬೇಕಿದೆ.