ETV Bharat / bharat

ಚೀನಾದ ಆ 59 ಆ್ಯಪ್​ಗಳು ಭಾರತದಲ್ಲಿ 5 ಬಿಲಿಯನ್​ ಡೌನ್​ಲೋಡ್​ ಆಗಿದ್ದವು! - ಮೊಬೈಲ್ ಆ್ಯಪ್​ಗಳು

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 69 ಎ ಅಡಿಯಲ್ಲಿ ಚೀನಾ ಆ್ಯಪ್​ಗಳನ್ನು ನಿಷೇಧಿಸಲಾಗಿದೆ. ಈ ಕಾಯ್ದೆಯಡಿ ಯಾವುದೇ ಕಂಪ್ಯೂಟರ್​ನಿಂದ ಬಳಕೆದಾರರಿಗೆ ಮಾಹಿತಿ ವರ್ಗಾವಣೆಯನ್ನು ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ.

59 banned apps
59 banned apps
author img

By

Published : Jul 1, 2020, 12:44 PM IST

ಹೈದರಾಬಾದ್: ಇತ್ತೀಚೆಗೆ ಭಾರತದಲ್ಲಿ ನಿಷೇಧಿಸಲ್ಪಟ್ಟ 59 ಅತ್ಯಂತ ಜನಪ್ರಿಯ ಚೀನಾ ಆ್ಯಪ್​ಗಳು 2014 ರಿಂದೀಚೆಗೆ ಭಾರತದಲ್ಲಿ 5 ಬಿಲಿಯನ್ (500 ಕೋಟಿ) ಡೌನ್​ಲೋಡ್​​ ಆಗಿದ್ದವು ಎಂದು ಮೂಲಗಳು ತಿಳಿಸಿವೆ. ಆ್ಯಪ್​ ಮಾರ್ಕೆಟ್​ ಸಮೀಕ್ಷಕ ವೆಬ್​ಸೈಟ್​ ಸೆನ್ಸಾರ್ ಟವರ್ ಈ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ದೇಶದಲ್ಲಿ ಯುವಜನತೆಗೆ ಅತಿ ಪ್ರಿಯವಾಗಿದ್ದ ವಿಡಿಯೋ ಆ್ಯಪ್​ ಟಿಕ್​ಟಾಕ್​ನ ಒಟ್ಟು ಜಾಗತಿಕ ಡೌನ್​ಲೋಡ್​ ಪೈಕಿ ಭಾರತದಲ್ಲೇ ಶೇ.30 ರಷ್ಟು ಡೌನ್​ಲೋಡ್​ ಮಾಡಲಾಗಿತ್ತು. ಭಾರತದಲ್ಲಿ ಟಿಕ್​ಟಾಕ್​ 611 ಮಿಲಿಯನ್​ ಬಾರಿ ಲೈಫ್​ಟೈಮ್ ಡೌನ್​ಲೋಡ್​ ಕಂಡಿತ್ತು ಎಂದು ಸೆನ್ಸಾರ್​ ಟವರ್ ಹೇಳಿದೆ. ಕೇವಲ ಡೌನ್​ಲೋಡ್​ ಮಾತ್ರವಲ್ಲದೇ ಟಿಕ್​ಟಾಕ್ ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿತ್ತೆಂಬುದು ವಾಸ್ತವ.

ಆ್ಯಪ್​ ಬ್ಯಾನ್​ ಹಿಂದಿನ ಕಾನೂನು

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 69 ಎ ಅಡಿಯಲ್ಲಿ ಚೀನಾ ಆ್ಯಪ್​ಗಳನ್ನು ಬ್ಯಾನ್ ಮಾಡಲಾಗಿದೆ. ಈ ಕಾಯ್ದೆಯಡಿ ಯಾವುದೇ ಕಂಪ್ಯೂಟರ್​ನಿಂದ ಬಳಕೆದಾರರಿಗೆ ಮಾಹಿತಿ ವರ್ಗಾವಣೆಯನ್ನು ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ.

ನಿಷೇಧವನ್ನು ಹೇಗೆ ಜಾರಿ ಮಾಡಲಾಗುತ್ತದೆ?

ಕೇಂದ್ರ ಸರ್ಕಾರದ ಆದೇಶವು ಕೈಸೇರುತ್ತಿದ್ದಂತೆಯೇ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್​ಗಳು ಈ ಆ್ಯಪ್​ಗಳನ್ನು ತಮ್ಮ ಪ್ಲಾಟ್​ಫಾರ್ಮ್​ನಿಂದ ತೆಗೆದು ಹಾಕುವುದು ಕಡ್ಡಾಯ. ಅದರಂತೆ ಈಗಾಗಲೇ ಟಿಕ್​ಟಾಕ್​ ಅನ್ನು ತೆಗೆದು ಹಾಕಲಾಗಿದೆ. ಇದರ ಜೊತೆಗೆ ಈ ಆ್ಯಪ್​ಗಳಿಗೆ ಡೇಟಾ ಟ್ರಾಫಿಕ್ ನಿಲ್ಲಿಸಲು ಇಂಟರ್​ನೆಟ್​ ಸೇವಾ ಪೂರೈಕೆದಾರರು ಹಾಗೂ ಟೆಲಿಕಾಂ ಕಂಪನಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಈ ಕ್ರಮಗಳು ಜಾರಿಗೆ ಬಂದ ತಕ್ಷಣ ಬ್ಯಾನ್ ಆಗಿರುವ ಆ್ಯಪ್​ಗಳು ತಾನಾಗಿಯೇ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.