ಪಾಲಕ್ಕಡ (ಕೇರಳ): ಫುಟ್ಬಾಲ್ ಪಂದ್ಯದ ವೇಳೆ ಮೈದಾನದ ತಾತ್ಕಾಲಿಕ ಗ್ಯಾಲರಿ ಕುಸಿದು 50 ಜನ ಗಾಯಗೊಂಡಿದ್ದಾರೆ. ಕೇರಳದ ಪಾಲಕ್ಕಡನಲ್ಲಿ ಈ ಅವಘಡ ಸಂಭವಿಸಿದೆ.
ಪಂದ್ಯ ಆರಂಭಕ್ಕೂ ಮುನ್ನವೇ ಗ್ಯಾಲರಿ ಕುಸಿದಿದೆ. ಭಾರತೀಯ ಫುಟ್ಬಾಲ್ ದಂತಕತೆ ಐ ಎಂ ವಿಜಯನ್ ಹಾಗೂ ಭೈಚುಂಗ್ ಭುಟಿಯಾ ಕೂಡ ಅವಘಡದ ವೇಳೆ ಸ್ಟೇಡಿಯಂನಲ್ಲಿದ್ದರು. ಆದ್ರೆ ಅವರು ಅಪಾಯದಿಂದ ಪಾರಾಗಿದ್ದಾರೆ.
ಸುಮಾರು 50 ಜನ ಗಾಯಾಳುಗಳನ್ನು ಹತ್ತಿರದ ಹಲವು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಗಾಯಾಳುಗಳನ್ನು ರಕ್ಷಿಸಿದರು ಎಂದು ಪಾಲಕ್ಕಡ್ ಎಂಪಿ ವಿ.ಕೆ.ಶ್ರೀಕಂದನ್ ತಿಳಿದರು.
ಡಿ.29ರಂದು ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಅಖಿಲಾ ಭಾರತ ಸೆವೆನ್ಸ್ ಟೂರ್ನಾಮೆಂಟ್ ವೇಳೆ ಹೃದಯಾಘಾತದಿಂದ ಮೃತಪಟ್ಟ ಫುಟ್ಬಾಲ್ ಆಟಗಾರ ಆರ್.ಧನರಾಜನ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಈ ಪಂದ್ಯ ಆಯೋಜಿಸಲಾಗಿತ್ತು.