ETV Bharat / bharat

166 ಸರ್ಕಾರಿ ಹುದ್ದೆಗಳಿಗೆ 5 ಲಕ್ಷ ಅರ್ಜಿ! ನಾವೇನು ಮಾಡೋಕಾಗುತ್ತೆ ಅಂದ್ರು ಸಚಿವರು! - ಬಿಹಾರದಲ್ಲಿ 166 ಪೋಸ್ಟ್​ಗಳಿಗೆ 5 ಲಕ್ಷ ಅರ್ಜಿಗಳು

ಬಿಹಾರದಲ್ಲಿ 166 ಗ್ರೂಪ್​-ಡಿ ಹುದ್ದೆಗಳಿಗೆ 5 ಲಕ್ಷ ಅರ್ಜಿಗಳು ಬಂದಿದ್ದು, ಈ ಕುರಿತು ಬಿಹಾರದ ಗ್ರಾಮೀಣಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರವಣ್​​​​ ಕುಮಾರ್,​​ ಇದಕ್ಕೆ ಸರ್ಕಾರ ಏನು ಮಾಡೋಕಾಗತ್ತೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಬಿಹಾರ ಸಚಿವ
author img

By

Published : Nov 23, 2019, 8:52 AM IST

ಪಾಟ್ನಾ: ಬಿಹಾರದಲ್ಲಿ 166 ಗ್ರೂಪ್​-ಡಿ ಹುದ್ದೆಗಳಿಗೆ 5 ಲಕ್ಷ ಅರ್ಜಿಗಳು ಬಂದಿರುವ ವಿಚಾರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಹಾರ ಸಚಿವ ಶ್ರವಣ್​​​​ ಕುಮಾರ್​​, ಇಷ್ಟೊಂದು ಜನರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಸರ್ಕಾರ ಏನು ಮಾಡೋಕಾಗುತ್ತೆ? ಎಂದು ಹೇಳಿಕೆ ನೀಡಿದ್ದಾರೆ.

166 ಗ್ರೂಪ್-ಡಿ ಖಾಲಿ ಹುದ್ದೆಗಳಿಗೆ ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಬಿಎ ಮತ್ತು ಎಂಸಿಎ ಪದವಿ ಪಡೆದವರನ್ನು ಒಳಗೊಂಡಂತೆ ಸುಮಾರು ಐದು ಲಕ್ಷ ಅರ್ಜಿದಾರರು ಅರ್ಜಿ ಸಲ್ಲಿಸಿದ್ದು, ಬಿಹಾರ ಸರ್ಕಾರಕ್ಕೆ ಈಗ ತಲೆಬಿಸಿಯಾಗಿದೆ. ಹೀಗೆ ಸರ್ಕಾರಿ ನೌಕರಿಗೆ ಬೇಡಿಕೆ ಹೆಚ್ಚುತ್ತಿರುವುದು ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗದೆ ನಿರುದ್ಯೋಗ ಸಮಸ್ಯೆಗೆ ಎತ್ತಿ ಹಿಡಿದ ಕನ್ನಡಿಯಾಗಿದೆ.

ಆದರೆ ಈ ಕುರಿತು ಬಿಹಾರದ ಗ್ರಾಮೀಣಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರವಣ್​​​​ ಕುಮಾರ್​​ ಉಡಾಫೆ ಉತ್ತರ ನೀಡಿದ್ದು, ಜನರು ತಮ್ಮ ತಮ್ಮ ಇಚ್ಛೆಯಂತೆ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಸರ್ಕಾರ ಏನು ಮಾಡಲು ಸಾಧ್ಯ? ಒಂದು ನಿರ್ದಿಷ್ಟ ಉದ್ಯೋಗಕ್ಕೆ ಇಂತಿಷ್ಟೇ ಅರ್ಜಿ ಸಲ್ಲಿಸಬೇಕೆಂದು ಸರ್ಕಾರ ಹೇಳುವ ಹಾಗೆ ಇಲ್ಲ. ಅರ್ಹ ಅರ್ಜಿದಾರರನ್ನು ಆಯ್ಕೆ ಮಾಡಿ ಖಚಿತಪಡಿಸುವುದು ಮಾತ್ರವೇ ಸರ್ಕಾರದ ಕೆಲಸ ಎಂದು ಹೇಳಿದ್ದಾರೆ.

ಪ್ರಪಂಚದಾದ್ಯಂತ ಉದ್ಯೋಗಕ್ಕೆ ಹೆಚ್ಚುತ್ತಿರುವ ಸ್ಪರ್ಧೆ ಕುರಿತು ದೂಷಿಸಿದ ಅವರು, ಇದು ಆತಂಕಕಾರಿ ಬೆಳವಣಿಗೆಯಾದರೂ ಕಠಿಣ ಸ್ಪರ್ಧೆಯನ್ನ ಹಿಂಬಾಲಿಸಿ ಇಡೀ ಜಗತ್ತೇ ಸಾಗುತ್ತಿದೆ ಎಂದರು.

Intro:Body:

nat

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.