ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಅಬ್ಬರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರನ್ನು ಬಲಿ ಪಡೆಯುತ್ತಿರುವ ವೈರಾಣು ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ 40 ಜನರನ್ನು ಹೆಮ್ಮಾರಿ ಆಹುತಿ ಪಡೆದುಕೊಂಡಿದೆ.
ದೇಶದ ಹಣಕಾಸು ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮುಂಬೈನಲ್ಲಿ 10 ಮಂದಿ ಸಾವನ್ನಪ್ಪಿದ್ದು, ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ಕಂಡು ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,364 ತಲುಪಿದೆ.
ದೇಶದಲ್ಲಿ ಇಲ್ಲಿಯವರೆಗೆ 7,447 ಸೋಂಕಿತರು ಕಂಡುಬಂದಿದ್ದಾರೆ. 239 ಜನ ಈಗಾಗಲೇ ಮಾರಣಾಂತಿಕ ಖಾಯಿಲೆಯ ಜೊತೆ ಹೋರಾಡಲಾಗದೆ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕದಲ್ಲಿ 6, ತಮಿಳುನಾಡು 9 ಹಾಗೂ ಮಹಾರಾಷ್ಟ್ರದಲ್ಲಿ 60ಕ್ಕೂ ಹೆಚ್ಚು ಜನರು ಸಾವಿನ ಮನೆ ಸೇರಿ ಆಗಿದೆ. ಉಳಿದಂತೆ ದೇಶಾದ್ಯಂತ 643 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನು 6,565 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ 1,574, ತಮಿಳುನಾಡಿನಲ್ಲಿ 911, ಉತ್ತರಪ್ರದೇಶದಲ್ಲಿ 431, ತೆಲಂಗಾಣ 473, ಮಧ್ಯಪ್ರದೇಶ 435, ಗುಜರಾತ್ 308, ಪಶ್ಚಿಮ ಬಂಗಾಳ 116, ಕರ್ನಾಟಕ 207, ನವದೆಹಲಿ 903, ಕೇರಳ 364, ರಾಜಸ್ಥಾನ 553 ಕೇಸ್ಗಳು ಕಂಡು ಬಂದಿವೆ.