ರಾಮ್‌ಗಢ್: ಹಿಮನದಿ ಸ್ಫೋಟಗೊಂಡಾಗಿನಿಂದ ಜಾರ್ಖಂಡ್‌ನ ರಾಮ್‌ಗಢ ಜಿಲ್ಲೆಯ ಎರಡು ಹಳ್ಳಿಗಳಿಂದ ಕನಿಷ್ಠ ನಾಲ್ವರು ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂದೀಪ್ ಸಿಂಗ್ ತಿಳಿಸಿದ್ದಾರೆ.
ಕಾಣೆಯಾದ ನಾಲ್ವರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ತವರು ಗ್ರಾಮ ನೆಮ್ರಾ ಬಳಿಯ ಚಿಕಾಡ್ ಮತ್ತು ಸಗ್ರಾಂಪುರ ಗ್ರಾಮಗಳಿಗೆ ಸೇರಿದವರು. ಅವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಅವರಲ್ಲಿ ಮೂವರು ಚಿಕಾಡ್ ಗ್ರಾಮಕ್ಕೆ ಸೇರಿದವರಾಗಿದ್ದರೆ, ಒಬ್ಬರು ಸಗ್ರಂಪುರ ಮೂಲದವರು.
ಈ ವರ್ಷದ ಜನವರಿ 6ರಂದು ಎನ್‌ಟಿಪಿಸಿಯ ತಪೋವನ್ ಯೋಜನೆಯಲ್ಲಿ ಕೆಲಸ ಮಾಡಲು ಪತಿ ಬಿರ್ಸೆ ಮಹತೋ ಮತ್ತು ಇತರ ಮೂವರು ಕಾರ್ಮಿಕರು ಚಮೋಲಿಗೆ ಹೋಗಿದ್ದರು ಎಂದು ಚಿಕಾದ್ ಗ್ರಾಮದ ರಿನ್ಸೆ ದೇವಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗುವಾಹಟಿ-ಬೆಂಗಳೂರು ವಿಮಾನ ಕೋಲ್ಕತ್ತಾಗೆ ಡೈವರ್ಟ್: ಪ್ರಯಾಣಿಕರು ಸುರಕ್ಷಿತ
ನಾಪತ್ತೆಯಾದ ಕಾರ್ಮಿಕರ ಸಂಬಂಧಿಕರು ಮಂಗಳವಾರ ಉತ್ತರಾಖಂಡಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಮೋಲಿಯಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದ ಕಾರ್ಮಿಕರಿಗೆ ಜಾರ್ಖಂಡ್ ಸರ್ಕಾರ ಎಲ್ಲಾ ಸಹಾಯ ನೀಡಲಿದೆ ಎಂದು ಸೊರೆನ್ ಸೋಮವಾರ ಜನರಿಗೆ ಭರವಸೆ ನೀಡಿದ್ದರು.