ETV Bharat / bharat

ಚಿನ್ನದ ವ್ಯವಹಾರದಲ್ಲಿ ನಷ್ಟ: ಒಂದೇ ಕುಟುಂಬದ ನಾಲ್ವರಿಂದ ಸಾಮೂಹಿಕ ಆತ್ಮಹತ್ಯೆ - ಆಭರಣಗಳ ವ್ಯವಹಾರದಲ್ಲಿ ತೊಂದರೆ

ಆಭರಣಗಳ ವ್ಯವಹಾರದಲ್ಲಿ ನಷ್ಟವಾದ ಕಾರಣ ರಾಜಸ್ಥಾನದ ಜೈಪುರದಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Jaipur
Jaipur
author img

By

Published : Sep 19, 2020, 12:42 PM IST

ರಾಜಸ್ಥಾನ: ಜೈಪುರದ ಕನೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ಕು ಜನರು ಒಟ್ಟಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ

ಯಶ್ವಂತ್ ಸೋನಿ, ಅಜಿತ್ ಸೋನಿ, ಮಮತಾ ಸೋನಿ ಮತ್ತು ಭರತ್ ಸೋನಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ. ಆಭರಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಕುಟುಂಬವು ಸಾಲದಿಂದ ತೊಂದರೆಗೀಡಾಗಿತ್ತು ಎಂದು ಹೇಳಲಾಗುತ್ತಿದೆ.

ಮೃತ ಕುಟುಂಬಕ್ಕೆ ಜೈಪುರ ಮತ್ತು ಅಲ್ವಾರ್​ನಲ್ಲಿ ಆಭರಣ ಅಂಗಡಿ ಇತ್ತು. ಆಭರಣಗಳ ವ್ಯವಹಾರದಲ್ಲಿ ತೊಂದರೆ ಆದ ಕಾರಣ ಜೈಪುರ ಮತ್ತು ಅಲ್ವಾರ್ ಅಂಗಡಿಗಳನ್ನು ಮಾರಾಟ ಮಾಡುವುದಾಗಿ ಘೋಷಿಸಿದ್ದರು ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ.

ಇನ್ನು ಸ್ಥಳಕ್ಕಾಗಮಿಸಿದ ಡಿಎಸ್ಪಿ ಮನೋಜ್ ಚೌಧರಿ ಮತ್ತು ತಂಡ ಘಟನೆಯ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಪೊಲೀಸರಿಗೆ ಆತ್ಮಹತ್ಯೆ ಸ್ಥಳದಲ್ಲಿ ಯಾವುದೇ ಡೆತ್​​ನೋಟ್​ ದೊರೆತಿಲ್ಲ ಹಾಗೂ ಸಾವಿನ ಕಾರಣ ತಿಳಿದು ಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.