ತಿರುವನಂತಪುರಂ: ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಕೇರಳದ ನಾಲ್ವರು ಶಾಸಕರಲ್ಲಿ ಕೋವಿಡ್ ದೃಢಪಟ್ಟಿದೆ.
ನಯತಿಂಕರ ಕ್ಷೇತ್ರದ ಕೆ.ಅನ್ಸಲನ್ (ಸಿಪಿಐ-ಎಂ), ಕೊಲ್ಲಂ ಕ್ಷೇತ್ರದ ಕೆ.ದಾಸನ್ (ಸಿಪಿಐ-ಎಂ), ಕೊಯಿಲಾಂಡಿ ಕ್ಷೇತ್ರದ ಮುಖೇಶ್ (ಸಿಪಿಐ-ಎಂ), ಪೀರ್ಮೆಡು ಕ್ಷೇತ್ರದ ಇ.ಎಸ್. ಬಿಜಿಮೋಲ್ (ಸಿಪಿಐ) ಇವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ದಾಸನ್ ಮತ್ತು ಕೆ.ಅನ್ಸಲನ್ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖೇಶ್ ಮತ್ತು ಬಿಜಿಮೋಲ್ ಹೋಂ ಐಸೋಲೇಷನ್ನಲ್ಲಿದ್ದಾರೆ.