ಶ್ರೀನಗರ: ಆರ್ಟಿಕಲ್ 370 ರದ್ದು ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇದರ ಮಧ್ಯೆ ಜಮ್ಮು-ಕಾಶ್ಮೀರದ ಜೈಲಿನಲ್ಲಿದ್ದ 70 ಉಗ್ರರು ಹಾಗೂ 30 ಕೈದಿಗಳನ್ನ ಆಗ್ರಾದ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಪೊಲೀಸ್ ವ್ಯಾನ್ನಲ್ಲಿ ಏರ್ಪೋರ್ಟ್ ಕರೆದ್ಯೊಯಲಾಗಿದ್ದು, ಬಳಿಕ ಅವರನ್ನ ವಿಶೇಷ ವಿಮಾನದ ಮೂಲಕ ಭಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಆಗ್ರಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಗೆ ಅವರನ್ನ ಕರೆದುಕೊಂಡು ಹೋಗಲಾಗಿದ್ದು, ಎಲ್ಲರೂ 2:45ಗೆ ಆಗ್ರಾ ಜೈಲು ಸೇರಿದ್ದಾರೆ.
ಕಣಿವೆ ನಾಡಿಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಅಲ್ಲಿ ಹೆಚ್ಚಿನ ಸೇನಾ ಪಡೆ ಜಮಾವಣೆ ಮಾಡಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಇದರ ಮಧ್ಯೆ ನಿನ್ನೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಣಿವೆ ನಾಡಿಗೆ ಭೇಟಿ ನೀಡಿ, ಅಲ್ಲಿನ ನಾಗರಿಕರು, ಪೊಲೀಸರು ಹಾಗೂ ಸೇನಾ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.